ಮಾಜಿ ಸಿಎಂ ಅಶೋಕ್ ಚವಾಣ್ ಗೆ ಕೊರೋನಾ

ಮಾಜಿ ಸಿಎಂ ಅಶೋಕ್ ಚವಾಣ್ ಗೆ ಕೊರೋನಾ

ಮುಂಬೈ: ಮಾಜಿ ಸಚಿವ ಅಶೋಕ್ ಚವಾಣ್ ಅವರಿಗೆ ಕೊರೋನಾ ಸೋಂಕು ತಗುಲಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳೂ ಆವರ ಸ್ಯಾಂಪಲ್ ಪರೀಕ್ಷೆ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ಕೆಲ ದಿನಗಳ ಹಿಂದೆ ಅವರಿಗೆ ಸೋಂಕು ತಗುಲಿದೆ. ಇದೀಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ತೊಬ್ಬ ಸಚಿವ ಜಿತೇಂದ್ರ ಅಹವಾದ್ ಅವರಿಗೂ ಹಿಂದೆ ಕೊರೋನಾ ಸೋಂಕು ತಗುಲಿತ್ತು. ಎರಡಕ್ಕೂ ಹೆಚ್ಚು ವಾರಗಳ ಕಾಲ ಅವರು ಮುಂಬೈನ ಆಸ್ಪತ್ರೆಯಲ್ಲಿ ದಾಖಲಾಗಿ ಇದೀಗ ಗುಣಮುಖರಾಗಿದ್ದಾರೆ. ಇನ್ನು, ಅಶೋಕ್ ಚವಾಣ್ ಅವರಿಗೆ ಕೊರೋನಾ ಸೋಂಕು ಹೇಗೆ ತಗುಲಿತು ಎಂಬುದು ನಿಖರವಾಗಿ ತಿಳಿದಿಲ್ಲ.

Related