ಬೇವಿನ ಕೊಂಬೆಯಲ್ಲಿ ನೊರೆ ಹಾಲು

ಬೇವಿನ ಕೊಂಬೆಯಲ್ಲಿ ನೊರೆ ಹಾಲು

ದೇವದುರ್ಗ : ಪ್ರಕೃತಿ ವಿಸ್ಮಯವೊ ಏನೋ ಆಗಾಗ ಪರಸರದಲ್ಲಿ ಅಚ್ಚರಿಯ ಸಂಗತಿಗಳು ಗೋಚರಿಸಿ ಮಾನವ ಸಂಕುಲಕ್ಕೆ ವಿಸ್ಮಯ ಮೂಡಿಸಿ ಜಗತ್ತನ್ನು ಮೂಕ ವಿಸ್ಮಿತಗೊಲಿಸುವುದು ಸರ್ವೇ ಸಾಮಾನ್ಯ. ಪ್ರಕೃತಿಯ ವೈಶಿಷ್ಟವೇ ಹಾಗೆ ಅಲ್ಲವೆ ಅಂತೆಯೆ ದೇವದುರ್ಗ ತಾಲೂಕಿನ ಚಿಂತಲಕುಂಟಾ ಗ್ರಾಮದಲ್ಲಿ ಬೇವಿನ ಮರದಿಂದ ಉಕ್ಕಿ ಬರುತ್ತಿರುವ ಹಾಲಿನಂತಹ ಹೆಂಡದ ನೊರೆ ಬರುತ್ತಿದೆ. ಬೇವಿನ ಮರದ ಕೊಂಬೆಯಲ್ಲಿ ಉಕ್ಕಿ ಹರಿಯುತ್ತಿರುವ ಹಾಲಿನಂತಹ ನೊರೆ ಆಕರ್ಷಣೀಯವಾಗಿದ್ದು ಜನತೆಯಲ್ಲಿ ಭಕ್ತಿ ಭಾವ ಮೂಡಿಸಿ ಜನಾಕರ್ಷಣೆಯ ಕೇಂದ್ರವಾಗುತ್ತಿದೆ.

ಬೇವಿನ ಮರದ ಕೊಂಬೆಗೆ ಪೂಜೆ ಮಾಡಲಾಗಿದ್ದು ಕೊಂಬೆಯಿಂದ  ಸೋರುತ್ತಿರುವ ಹಾಲಿನಂತಹ ನೊರೆ ಸಂಗ್ರಹಿಸಲು ಕೊಂಬೆಗೆ ಅಲ್ಯುಮಿನಿಯಂ ಬೇಸಿನ್‌ನಲ್ಲಿ ಸಂಗ್ರಹಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವಿಜಯಕುಮಾರ್ ಪಾಟೀಲ್ ಪೋ ಪಾ. ಅವರು ಅದನ್ನು ಚಿತ್ರೀಕರಿಸಿ ಕಳಿಸಿರುವ ದೃಶ್ಯ ಆ ಬೇವಿನ ಮರಕ್ಕೆ ಪೂಜೆ ಮಾಡಿರುವ ಘಟನೆ ನಡೆದಿದೆ.

Related