ತಲೈವಾ ನಟನೆಯ 171ನೇ ಚಿತ್ರದ ಫಸ್ಟ್ ಲುಕ್ ರಿಲೀಸ್

ತಲೈವಾ ನಟನೆಯ 171ನೇ ಚಿತ್ರದ ಫಸ್ಟ್ ಲುಕ್ ರಿಲೀಸ್

ಬೆಂಗಳೂರು: ರಜನಿಕಾಂತ್ ಅವರು ತಮ್ಮ ನಟನೆಯ ಮೂಲಕವೇ ಅಭಿಮಾನಿಗಳ ಸಾಗರವನ್ನೇ ಹೊಂದಿದ್ದಾರೆ. ರಜನಿಕಾಂತ್ ನಟನೆಯ 171ನೆಯ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ತಲೈವಾ ಅಭಿಮಾನಿಗಳು ಫಸ್ಟ್ ಲುಕ್ ನೋಡಿ ಫುಲ್ ಫಿದಾ ಆಗಿದ್ದಾರೆ.

ತಲೈವಾ ನಟನೆಯ 171ನೇ ಚಿತ್ರದ ಫಸ್ಟ್ ಲುಕ್ ನಲ್ಲಿ ಗೋಲ್ಡ್ ಕಲರ್ ಉಳ್ಳ ವಾಚ್ ಅನ್ನು ತನ್ನ ಕೈ ಬೇಡ್ಡಿಯನ್ನಾಗಿ ಮಾಡಿಕೊಂಡು ಅಭಿಮಾನಿಗಳ ಮುಂದೆ ಬಂದಿದ್ದಾರೆ ಇದರಿಂದ ರಜನಿಕಾಂತ್ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಕೆರಳಿಸಿದೆ.

ಈಗಾಗಲೇ ರಜನಿಕಾಂತ್ ನಟನೆಯ 171ನೇ ಸಿನಿಮಾದ ಬಗ್ಗೆ ಹಲವಾರು ಕುತೂಹಲಕಾರಿಗಳ ವಿಷಯಗಳು ಹೊರ ಬಿದ್ದಿದ್ದು ಅಭಿಮಾನಿಗಳು ಈ ಚಿತ್ರದ ಮೇಲೆ ಬಹುನಿರೀಕ್ಷಣೆ ಇಟ್ಟುಕೊಂಡಿದ್ದಾರೆ.

ಇನ್ನು ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಅವರೇ ತಮ್ಮ ಸೋಷಿಯಲ್ ಮೀಡಿಯಾದ ಪೇಜ್ ನಲ್ಲಿ ಫಸ್ಟ್ ಲುಕ್ ಅನ್ನು ಪೋಸ್ಟ್ ಮಾಡಿದ್ದಾರೆ.

 

Related