ಕಾಂಗ್ರೆಸ್ ವಿರುದ್ಧ ಎಫ್‌ಐಆರ್

ಕಾಂಗ್ರೆಸ್ ವಿರುದ್ಧ ಎಫ್‌ಐಆರ್

ಬೆಂಗಳೂರು : ಕೊರೋನಾ ಸೋಂಕಿನ ಪ್ರಕರಣಗಳ ಮಹಾಸ್ಪೋಟದ ನಡುವೆಯೂ, ತೈಲ ಉತ್ಪಮನ್ನಗಳ ಬೆಲೆ ಏರಿಕೆ ಉಂಟಾಗುತ್ತಿರುವುದನ್ನ ವಿರೋಧಿಸಿ, ಕಾಂಗ್ರೆಸ್‌ನ ಸಲೀಂ ಅಹ್ಮದ್ ಸೇರಿದಂತೆ ವಿವಿಧ ಮುಖಂಡರ ನೇತೃತ್ವದಲ್ಲಿ ರಾಜ್ಯ, ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಇಂತಹ ಪ್ರತಿಭಟನೆಯನ್ನು ಲಾಕ್‌ಡೌನ್ ಜಾರಿಯಲ್ಲಿದ್ದರೂ, ಪೊಲೀಸರ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದರಿಂದಾಗಿ, ಇದೀಗ ಕಾಂಗ್ರೆಸ್ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ತೈಲ ಬೆಲೆ ಏರಿಕೆಯಿಂದಾಗಿ ರಾಜ್ಯದಲ್ಲಿ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ ಎಂಬುದಾಗಿ ಆರೋಪಿಸಿ, ಕಾಂಗ್ರೆಸ್‌ನಿAದ ಸೋಮವಾರ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ಲಾಕ್ ಡೌನ್ ಜಾರಿಯಾಗಿದ್ದರಿಂದಾಗಿ ಪೊಲೀಸರು ಅನುಮತಿ ಕೂಡ ನೀಡಿರಲಿಲ್ಲ. ಇದರ ಮಧ್ಯೆಯೂ ಪ್ರತಿಭಟನೆ ನಡೆಸಿದಂತ ಕಾಂಗ್ರೆಸ್ ಮುಖಂಡರ ವಿರುದ್ಧ, ಇದೀಗ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಎಫ್‌ಐಆರ್ ನಲ್ಲಿ ನಂ.1 ಆರೋಪಿಯಾಗಿ ಸಲೀಂ ಆಹ್ಮದ್ ಅವರನ್ನು ಮಾಡಲಾಗಿದೆ.

Related