ಬೆಂಗ್ಳೂರಿನ ಸರ್ಕಾರಿ ಶಾಲೆಯ ವಿರುದ್ದ ಎಫ್ ಐ ಆರ್ !

  • In Crime
  • July 14, 2022
  • 213 Views
ಬೆಂಗ್ಳೂರಿನ ಸರ್ಕಾರಿ ಶಾಲೆಯ ವಿರುದ್ದ ಎಫ್ ಐ ಆರ್ !

ಬೆಂಗಳೂರಿನಲ್ಲಿ ಹೀಗೆ ಒಂದು ಶಾಲೆ ಸರ್ಕಾರದ ಪರವಾನಗಿ ಇಲ್ಲದೆ ತರಗತಿಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಆ ಶಾಲೆಯ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಬೆಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾದ ರಮೇಶ್ ವಿ ಅವರ ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸರು ಮಾಗಡಿ ರಸ್ತೆಯಲ್ಲಿರುವ ಆರ್ಕಿಡ್ಸ್- ದಿ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೊದಲೆಲ್ಲಾ ಒಂದು ಪಟ್ಟಣದಲ್ಲಿ ಒಂದೋ ಎರಡೋ ಶಾಲೆಗಳಿರುವುದು (School), ಎಲ್ಲಾ ಮಕ್ಕಳು ಬಹುತೇಕವಾಗಿ ಅದೇ ಎರಡು ಶಾಲೆಗಳಿಗೆ ಹೋಗುತ್ತಿದ್ದರು. ಅಲ್ಲದೆ ಅನೇಕರು ತಮ್ಮ ಹಳ್ಳಿಯಲ್ಲಿ (Village)  ಒಳ್ಳೆಯ ಶಾಲೆ ಇಲ್ಲ ಅಂತ ಹತ್ತಿರದ ನಗರದಲ್ಲಿರುವ ಶಾಲೆಗೆ ಹೋಗಿ ಬರುತ್ತಿದ್ದರು.

ಆದರೆ, ಇತ್ತೀಚಿನ ವರ್ಷಗಳಲ್ಲಿ ಒಂದು ಚಿಕ್ಕ ಪಟ್ಟಣವೇ ಆಗಿರಲಿ ಅದರ ಪ್ರತಿ ಏರಿಯಾದಲ್ಲಿ ಒಂದೊಂದು ಶಾಲೆಗಳಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಬಹುದು. ಇದರಲ್ಲಿ ಸರ್ಕಾರದ ಪರವಾನಗಿಯನ್ನು (Government License) ಪಡೆದುಕೊಂಡು ಅಗತ್ಯವಾದ ಎಲ್ಲಾ ನಿಯಮಗಳನ್ನು ಪಾಲಿಸಿ ನಡೆಸುತ್ತಿರುವ ಶಾಲೆಗಳ ಸಂಖ್ಯೆ ಎಷ್ಟಿರುತ್ತದೆಯೋ ಗೊತ್ತಿಲ್ಲ.

ಕೆಲವು ಪೋಷಕರು ಶಾಲೆ ಹೇಗಿದೆ? ಸರ್ಕಾರಿ ಪರವಾನಿಗಿಯನ್ನು ಪಡೆದುಕೊಂಡಿದ್ದಾರೆಯೇ ಅಂತೆಲ್ಲಾ ವಿಷಯಗಳ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲ ಪೋಷಕರು ಅದರ ಬಗ್ಗೆ ಸ್ವಲ್ಪವೂ ತಲೆನೇ ಕೆಡೆಸಿಕೊಳ್ಳುವುದಿಲ್ಲ. ಆದರೆ ಇಂತಹ ಪರವಾನಿಗಿಯನ್ನು ಪಡೆಯದೆ ನಡೆಸುತ್ತಿರುವ ಶಾಲೆಗಳ ಮೇಲೆ ಶಿಕ್ಷಣ ಇಲಾಖೆಯವರ ಗಮನ ಮಾತ್ರ ಇದ್ದೇ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Related