ಫಿಂಚ್ಗೆ ಕಾಡಿದ ಭಾರತೀಯ ವೇಗಿಗಳು!

ಫಿಂಚ್ಗೆ ಕಾಡಿದ ಭಾರತೀಯ ವೇಗಿಗಳು!

ನವದೆಹಲಿ, ಮಾ. 16 : ಆಸ್ಟ್ರೇಲಿಯಾದ ನಾಯಕ ಆ್ಯರೋನ್ ಫಿಂಚ್ ಆಕ್ರಮಣಕಾರಿ ಆರಂಭಿಕ ಬ್ಯಾಟ್ಸ್ಮನ್ ಎಂಬುದರಲ್ಲಿ ಸಂಶಯವೇ ಇಲ್ಲ. ವಿಶ್ವದ ಯಾವುದೇ ಬೌಲರ್ ಅನ್ನು ನಿರ್ದಯವಾಗಿ ಎದುರಿಸುತ್ತಾರೆ. ಅಂತಹ ಆಸೀಸ್ ನಾಯಕನಿಗೆ ಭಾರತೀಯ ವೇಗಿಗಳ ದುಃಸ್ವಪ್ನ ಕಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತ: ಆ್ಯರೋನ್ ಫಿಂಚ್ ಮಾಹಿತಿ ಕೊಟ್ಟಿದ್ದಾರೆ. 2018ರಲ್ಲಿ ಭಾರತದ ಆಸೀಸ್ ಪ್ರವಾಸದ ವೇಳೆಯಲ್ಲಿ ರಾತ್ರಿಯೆಲ್ಲ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಭಯ ಎಡೆಬಿಡದೆ ಕಾಡುತ್ತಿತ್ತು ಎಂದು ನುಡಿದಿದ್ದಾರೆ. ತಮಾಷೆ ರೂಪದಲ್ಲಿ ಎಂಬಂತೆ ಇವರಿಬ್ಬರು ತಮ್ಮ ವಿಕೆಟ್ಗಳನ್ನು ಕಬಳಿಸುತ್ತಿದ್ದರು ಎಂದು ಕೊರಗಿದ್ದಾರೆ.
ಆರಂಭಿಕ ಬ್ಯಾಟ್ಸ್ಮನ್ ಆದ ಫಿಂಚ್, ಭಾರತ ವಿರುದ್ದ ಸರಣಿಯಲ್ಲಿ ಎಲ್ಲ ಮೂರು ಪ್ರಕಾರದಲ್ಲೂ ಸತತ ವೈಫಲ್ಯವನ್ನು ಅನುಭವಿಸಿದ್ದರು. ಅದರಲ್ಲೂ ಭುವಿ ಇನ್ಸ್ವಿಂಗ್ ದಾಳಿಯನ್ನು ಎದುರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

Related