ಪೊಲೀಸರಿಂದಲೇ ತಂದೆ ಕೊಲೆ: ಸಿಬಿಐ ತನಿಖೆಗೆ ಆಗ್ರಹ

ಪೊಲೀಸರಿಂದಲೇ ತಂದೆ ಕೊಲೆ: ಸಿಬಿಐ ತನಿಖೆಗೆ ಆಗ್ರಹ

ವಿಜಯಪುರ :  ಜಿಲ್ಲೆಯ ಸಿಂದಗಿ ಠಾಣೆ ಪೊಲೀಸರು ತಮ್ಮ ತಂದೆ ಸಾವಿಗೆ ಕಾರಣವಾಗಿದ್ದಾರೆ. ತಾಯಿ ಹಾಗೂ ಸಹೋದರ ಮೇಲೆ ದೌರ್ಜನ್ಯ ನಡೆಸಿದ್ದಾರೆ.

ಇಲಾಖೆಯಲ್ಲಿ ಇದ್ದರೂ ಕುಟುಂಬಕ್ಕೆ ರಕ್ಷಣೆ ಸಿಗುತ್ತಿಲ್ಲ. ಮುಖ್ಯಮಂತ್ರಿ ಕಚೇರಿಯಿಂದ ಆದೇಶ ಬಂದರೂ ಸಿಂದಗಿ ಪೊಲೀಸರು ತಮಗೆ ನ್ಯಾಯ ದೊರಕಿಸಿಕೊಡುತ್ತಿಲ್ಲ ಎಂದು ಬೆಂಗಳೂರು ಪೊಲೀಸ್ ಠಾಣೆಯೊಂದರ ಪೇದೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಇಲಾಖೆ ಮೇಲಧಿಕಾರಿಗಳ ವಿರುದ್ಧ ಹರಿಹಾಯ್ದ ವೈರಲ್ ಆಗಿದೆ.

ಜಿಲ್ಲೆ ಸಿಂದಗಿ ಠಾಣೆ ಪೊಲೀಸರು ತಮ್ಮ ತಂದೆಯ ಹತ್ಯೆಗೆ ಕಾರಣ ಎಂದು ಯಲಹಂಕ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೆಬಲ್ ಬಸವರಾಜ ಪಾಟೀಲ ಆರೋಪ ಮಾಡಿದ್ದಾರೆ. ಚಿಕ್ಕಪ್ಪನ ಕುಮ್ಮಕ್ಕಿನಿಂದ ನಮ್ಮ ಕುಟುಂಬದ ಸದಸ್ಯರ ಮೇಲೆ ಈಗಾಗಲೇ ವಿವಿಧ ರೀತಿಯ 7 ಪ್ರಕರಣಗಳನ್ನು ದಾಖಲಿಸಿ ಬಂಧಿ ಸುವ, ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾರೆ. ಇದಲ್ಲದೇ ನನ್ನ ವಿರುದ್ಧವೂ ಪ್ರಕರಣ ದಾಖಲಿಸಿ ಸರ್ಕಾರಿ ಉದ್ಯೋಗಕ್ಕೆ ಕುತ್ತು ತರುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದ್ದಾರೆ.

ಸಿಂದಗಿ ತಾಲೂಕು ಭಂಟನೂರು ಗ್ರಾಮದ ತಮ್ಮ ತಂದೆ ಹನುಮಂತ್ರಾಯ ಪಾಟೀಲ ಹಾಗೂ ಚಿಕ್ಕಪ್ಪ ಶಿವಪ್ಪ ಮಧ್ಯೆ ಆಸ್ತಿ ವಿವಾದ ಇದ್ದು, ಚಿಕ್ಕಪ್ಪನ ಕುಮ್ಮಕ್ಕಿ ನಿಂದ ನಮ್ಮ ಕುಟುಂಬಕ್ಕೆ ಸಿಂದಗಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ತಂದೆ, ತಾಯಿ ಮಲ್ಲಮ್ಮ ಹಾಗೂ ಸಹೋದರ ರಮೇಶ ಮೇಲೆ ನಿರಂತರ ದೌರ್ಜನ್ಯ ನಡೆಸಿದ್ದಾರೆ.

ಸರ್ಕಾರ ಹಾಗೂ ಇಲಾಖೆಯೇ ನಮ್ಮ ಕುಟುಂಬದ ನೆರವಿಗೆ ಬಾರದ ಹಿನ್ನೆಲೆಯಲ್ಲಿ ಜೀವ ರಕ್ಷಣೆ ಹಾಗೂ ನ್ಯಾಯಕ್ಕಾಗಿ ನೇರವಾಗಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿದೆ.

Related