ರೈತರು, ಕೈ ನಾಯಕರು ಸಾಂಕೇತಿಕ ಪ್ರತಿಭಟನೆ

ರೈತರು, ಕೈ ನಾಯಕರು ಸಾಂಕೇತಿಕ ಪ್ರತಿಭಟನೆ

ಗಜೇಂದ್ರಗಡ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಲು ಹೊರಟಿರುವ ಕಾರ್ಮಿಕ ಕಾನೂನು, ಭೂ ಸುಧಾರಣ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳ ವಾಪಸ್ಸು ಪಡೆಯುವಂತೆ ಆಗ್ರಹಿಸಿ ಗಜೇಂದ್ರಗಡದಲ್ಲಿನ ರೈತರು ಮತ್ತು ಕೈ ನಾಯಕರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಬಳಿಕ ಕಾಂಗ್ರೆಸ್ ಮುಖಂಡ ಪ್ರಶಾಂತ ರಾಠೋಡ ಮಾತನಾಡಿ, ಕೇಂದ್ರ ಸರ್ಕಾರವೂ ಕಾರ್ಪೋರೆಟ್ ಕಂಪನಿಗಳ ಶ್ರಯೋಭಿವೃದ್ಧಿ ಬಯಸುವ ಮೂಲಕ ಅನ್ನದಾತರಿಗೆ ಅನ್ಯಾಯ ಮಾಡಲು ಮುಂದಾಗಿದೆ.
ಕೂಡಲೇ ಸರ್ಕಾರವೂ ಈ ನಿರ್ಧಾರವನ್ನು ಕೈ ಬಿಟ್ಟು ರೈತರಿಗೆ ಒಳಿತು ಮಾಡುವ ಕಾಯ್ದೆಗಳನ್ನು ಜಾರಿಗೆ ತರಬೇಕು. ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಸರ್ಕಾರ ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಕೆಗೆ ಮುಂದಾಗಬೇಕಾಗಿದೆ ಇಲ್ಲವಾದಲಿ ಮುಂದಿನ ದಿನಗಳಲ್ಲಿ ಅದು ತೀವ್ರ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ದಲಿತ ಮುಖಂಡ ಶರಣು ಪೂಜಾರ, ಉಮೇಶ ರಾಠೋಡ ಮಾತನಾಡಿದರು.

ಈ ಸಂದರ್ಭದಲ್ಲಿ ಹಸನ ತಟಗಾರ ಅನಿಲ ಕರ್ಣೇ, ಶರಣು ಸೊಬರದ, ಶರೀಫ ಸೌದಾಗಾರ, ಈರಣ್ಣ ಕಂಬಳಿ, ಬುಡ್ಡೇಸಾಬ ಪಾರಸ್, ಬಸವರಾಜ ಬಾರಕೇರ, ಶರಣಪ್ಪ ಪೂಜಾರ, ಇಸ್ಮಾಯಿಲ್ ಪರಾಸ್, ಹನಮಂತಗೌಡ ಗೌಡರ, ಮುತ್ತಪ್ಪ ಬೆನಕನವಾರಿ, ಸೇರಿದಂತೆ ಮತ್ತಿತರರಿದ್ದರು.

Related