ಪಾತಾಳ ಲಿಂಗೇಶ್ವರ ದರ್ಶನ ಪಾಪ ನಿವಾರಣೆ ನಂಬಿಕೆ

  • In State
  • February 20, 2020
  • 826 Views
ಪಾತಾಳ ಲಿಂಗೇಶ್ವರ ದರ್ಶನ ಪಾಪ ನಿವಾರಣೆ ನಂಬಿಕೆ

ತಿಪಟೂರು, ಫೆ. 20: ತಾಲೂಕಿನ ಕಸಬಾ ಹೋಬಳಿಯ ಗೊರಗೊಂಡನಹಳ್ಳಿಯ ಸಮೀಪ ಇರುವ ಸಿದ್ದರಾಮಣ್ಣ ಲೇಔಟ್‌ನಲ್ಲಿರುವ ಪಾತಾಳ ಲಿಂಗೇಶ್ವರ ಸ್ವಾಮಿಯ 2ನೇ ವರ್ಷದ ವಾರ್ಷಿಕೋತ್ಸವ ಫೆ.21 ರಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯುತ್ತಿದೆ. ಈ ಕ್ಷೇತ್ರವನ್ನು ದರ್ಶಿಸಿದರೆ ಸಕಲ ಅನಿಷ್ಠಗಳು ಕಳೆದು ಅಭೀಷ್ಠೆಗಳು ಈಡೇರುತ್ತವೆ ಎಂದು ತಿಳಿದು ರಾಜ್ಯದ ಮೂಲೆ ಮೂಲೆಗಳಿಂದ ಬಂದು ಅರಕೆ ಹೊತ್ತು ತಮ್ಮ ಇಷ್ಟಾರ್ಥ ಪೂರೈಸಿ ಕೊಳ್ಳುತ್ತಿದ್ದಾರೆ.

ನಗರದ ಪೂರ್ವ ಭಾಗದಲ್ಲಿರುವ ಪುಣ್ಯಕ್ಷೇತ್ರ ಯಡಿಯೂರಿಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಹುಲ್ಲುಕಟ್ಟೆ ಗೇಟ್ ಸಮೀಪವಿರುವ ಸಿದ್ದರಾಮಣ್ಣ ಲೇಔಟ್ ಕಾಮಗಾರಿ ಎಂದಿನಂತೆ ಮಾಡುವಾಗ ಭೂಮಿ ಆಗೆಯುವಾಗ ಸರ್ಪಗಳು ಪ್ರತ್ಯಕ್ಷವಾದವು ಇದನ್ನು ಕಂಡು ಕಾರ್ಮಿಕರು ಕೆಲಸ ನಿಲ್ಲಿಸಿ ಪುರೋಹಿತರನ್ನು ಕೇಳಿದಾಗ ಸರ್ಪಗಳು ಎಲ್ಲೆಂದರಲ್ಲಿ ಇರುವುದಿಲ್ಲಾ ಸರ್ಪಗಳು ಇವೆ ಎಂದರೆ ಯಾವುದಕ್ಕೋ ಕಾವಲು ಕಾಯುತ್ತಿರಬಹುದು ಎಂದು ಸ್ಥಳಕ್ಕೆ ಆಗಮಿಸಿ ಪರಿಕ್ಷೀಸಿ ಸ್ಥಳವನ್ನು ಆಗೆಯಲು ತಿಳಿಸಿದರು. ಭೂಗರ್ಭದಲ್ಲಿ ಸುಮಾರು ೬ ಆಡಿ ಆಳದಲ್ಲಿ ದೊರೆತ ಸ್ವಯಂಭೂ ಉದ್ಭವಲಿಂಗವೇ ಪಾತಳ ಲಿಂಗ.

ಲಿಂಗದ ಜತೆ ಉದ್ಭವವಾದ ನಂದಿಯ ವಿಗ್ರಹ ಕೂಡ ಯಾವುದೇ ಮಾರ್ಪಾಡಿಲ್ಲದೇ ಸಾಕ್ಷಾತ್ ನಂದಿಯಂತೆ ಕಂಗೊಳಿಸುತ್ತಿದ್ದು ಪ್ರತಿಷ್ಠಾಪಿಸಲಾಗಿದೆ, ಪಾತಾಳ ಲಿಂಗ ಅಲುಗಾಡಿಸಿದಾಗ ಆದರ ಅಂತರಾಳದಲ್ಲಿ ಘಂಟೆಯ ಧ್ವನಿ ಹೊರಹೊಮ್ಮುತ್ತಿದ್ದು ಈ ವಿಗ್ರಹಗಳು ದೊರಕಿದ್ದು ಶಿವರಾತ್ರಿಯ ದಿನವೆಂಬುದು ಕಾಕತಾಳಿಯ ಈ ಜಾಗದಲ್ಲಿಯೇ ಅಲದಮರದ ಮಧ್ಯಭಾಗದಲ್ಲಿ ಈಚಲು ಮರ ಬೆಳೆದಿದ್ದು ಹಲವಾರು ಪಾವಾಡಗಳನ್ನು ಸೃಷ್ಠಸುತ್ತಿದೆ. ಲಿಂಗ ಮುದ್ರೆ ಕಲ್ಲುಗಳು ಕ್ರಿ,ಶ 5 ಮತ್ತು 6 ನೇ ಶತಮಾನದಿಂದಲೂ ಲಿಂಗ ಮುದ್ರೆ ಕಲ್ಲುಗಳು ಇರುವುದು ಇತಿಹಾಸದ ದಾಖಲೆಗಳು ದೊರೆತಿವೆ. ರಾಜರ ಆಳ್ವಿಕೆ ಕಾಲದಲ್ಲಿ ಊರಿನ ಗಡಿ ಗುರುತಿಸಲು ಈ ಕಲ್ಲುಗಳನ್ನು ಹಾಕುತ್ತಿದ್ದರು, ಇತ್ತಿಚೆಗೆ ಈ ಕಲ್ಲುಗಳು ಎಲ್ಲೂ ಕಾಣುತ್ತಿಲ್ಲಾ, ಗೊರಗೊಂಡನಹಳ್ಳಿಯಲ್ಲಿ ಇಷ್ಟೊಂದು ಕಲ್ಲುಗಳು ಇದ್ದು ಜನರು ಇವುಗಳನ್ನು ಪೂಜಿಸುತ್ತಿರುವುದು ವಿಶೇಷ. ಇಂತಹ ಕಲ್ಲುಗಳನ್ನು ರಕ್ಷಿಸಿದ ಕೀರ್ತಿ ಅರ್.ಟಿ.ಐ ಕಾರ್ಯಕರ್ತ ರವಿಕುಮಾರ್‌ಗೆ ಸಲ್ಲುತ್ತದೆ. ಎರಡರಿಂದ ಆರು ಅಡಿ ಎತ್ತರದವರೆಗಿನ ಶಿವಲಿಂಗ, ಶಿವಲಿಂಗದ ಮುಂಭಾಗ ನಂದಿ ಕಲ್ಲು ಹಾಗೂ ಸೂರ್ಯ ಚಂದ್ರ ಆಕಾರದ ಕಲ್ಲುಗಳು ದೊರೆತಿವೆ.

ಶಿವರಾತ್ರಿ ಪೂಜೆ:  ಹಬ್ಬದ ಪ್ರಯುಕ್ತ ವಿಶೇಷ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಪಾತಾಳ ಲಿಂಗೇಶ್ವರ ಸ್ವಾಮಿಯವರಿಗೆ ಫಲಪಂಚಾಮೃತ ಅಭಿಷೇಕ,ಅಷ್ಟೋತ್ತರ ಅಲಂಕಾರ, 9 ರಿಂದ ಗಣಪತಿ ಪೂಜೆ ನವಗ್ರಹ, ಮೃತ್ಯುಂಜಯ, ರುದ್ರಹೋಮ, ಮದ್ಯಾಹ್ನ 12 ಕ್ಕೆ ಪೂರ್ಣಾಹುತಿ, ಪ್ರಸಾದ ವಿನಿಯೋಗ, ಸಂಜೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ರಾತ್ರಿ ಮಹಾಮಂಗಳಾರತಿಯೊಂದಿಗೆ ಜಾಗರಣೆ ನಡೆಯಲಿದೆ. ಹಬ್ಬದ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ಮಜಾ ಭಾರತ ಹಾಸ್ಯ ಕಲಾವಿದರ ತಂಡದಿಂದ ರಾತ್ರಿ 10 ಗಂಟೆಯಿಂದ ಹಾಸ್ಯ ರಸದೌತಣ ಕಾರ್ಯಕ್ರಮ ನಡೆಯಲಿದೆ.

ಲಿಂಗರಾಜ್ ಲೋಕೇಶ್

 

Related