ಕಣ್ಣಿನ ಆರೈಕೆ ಹೀಗಿರಲಿ

ಕಣ್ಣಿನ ಆರೈಕೆ ಹೀಗಿರಲಿ

ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಎಲ್ಲಾ ಅಂಗಗಳು ಶುದ್ಧವಾಗಿರಬೇಕು ಹಾಗೂ ಆರೋಗ್ಯವಾಗಿರಬೇಕು. ನಮ್ಮ ದೇಹದಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿರುವುದೆಂದರೆ ಅದು ಕಣ್ಣು. ಹೌದು ನಾವು ನಮ್ಮ ಕಣ್ಣನ್ನು ಅತಿ ಸೂಕ್ಷ್ಮ ಹಾಗೂ ಸಮೃದ್ಧಿಯಿಂದ ನೋಡಿಕೊಳ್ಳಬೇಕು ಇಲ್ಲದಿದ್ದರೆ ಕಣ್ಣಿನ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.

ನಾವು ನಮ್ಮ ಕಣ್ಣನ್ನುಬೆಳಿಗ್ಗೆ ಎದ್ದ ಕೂಡಲೆ ಮುಖ ತೊಳೆಯುವಾಗ, ಬಾಯಲ್ಲಿ ನೀರನ್ನು ತುಂಬಿಸಿಕೊಂಡು ಕಣ್ಣುಗಳಿಗೆ ನೀರನ್ನು ಸಿಂಪಡಿಸುವುದರಿಂದ ಕಣ್ಣುಗಳು ಶುದ್ದ ಹಾಗೂ ಫ್ರೆಶ್ ಆಗುತ್ತದೆ.

ಸೂರ್ಯೋದಯವಾಗುವ ಸಮಯದಲ್ಲಿ ಸೂರ್ಯನನ್ನು ನೋಡುವುದರಿಂದ ದೃಷ್ಥಿ ಉತ್ತಮವಾಗುತ್ತದೆ. ಅಲ್ಲದೆ ಮೂರನೆ ಕಣ್ಣು ಎಂದು ತಿಳಿಸುವ ಪೀನಲ್ ಗ್ರಂಥಿಯು ಪ್ರಚುರವಾಗುತ್ತದೆ.

ಕಣ್ಣುಗಳನ್ನು ಮಿಟುಕಿಸದೆ ಕತ್ತಲೆ ಕೋಣೆಯಲ್ಲಿ ತುಪ್ಪದ ದೀಪದ ಜ್ಯೋತಿಯನ್ನು 2-3 ನಿಮಿಷ ಸತತವಾಗಿ ನೋಡುವುದರಿಂದ ದೃಷ್ಟಿಯ ಶಕ್ತಿ ಮತ್ತು ಕಣ್ಣಿನ ಕಾಂತಿ ಹೆಚ್ಚುವುದು.

ಪಾದಗಳನ್ನು ಗಿಡಮೂಲಿಕೆಯುಕ್ತವಾದ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಹಚ್ಚಿ, ಮೃದುವಾಗಿ ಅಭ್ಯಂಜನ ಮಾಡುವುದರಿಂದ ರಕ್ತಸಂಚಾರ ಹೆಚ್ಚಾಗಿ, ಇದರಿಂದ ದೃಷ್ಠಿ, ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿ ಉತ್ತಮಗೊಳ್ಳುತ್ತದೆ.

 

Related