ಬೊಮ್ಮನಹಳ್ಳಿಯಲ್ಲಿ ಮುಂದುವರೆದ ತೆರವು ಕಾರ್ಯಚರಣೆ

ಬೊಮ್ಮನಹಳ್ಳಿಯಲ್ಲಿ ಮುಂದುವರೆದ ತೆರವು ಕಾರ್ಯಚರಣೆ

ಬೊಮ್ಮನಹಳ್ಳಿ: ಮಳೆಯ ಆರ್ಭಟಕ್ಕೆ ಇಡೀ ಬೆಂಗಳೂರು ನಗರವೇ ಅಕ್ಷರಶಃ ನಲುಗಿತ್ತು. ಒಂದೆಡೆ ರಾಜಕಾಲುವೆ ಒತ್ತುವರಿ ಬಿಬಿಎಂಪಿಗೆ ದೊಡ್ಡ ತಲೆ ನೋವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತು ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿಗೆ ತಾಕೀತು ಮಾಡಿದೆ.

ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜಕಾಲುವೆಯ ಒತ್ತುವರಿಗಳ ಕಾರ್ಯಚರಣೆಯು ಬೊಮ್ಮನಹಳ್ಳಿ ಬಿಬಿಎಂಪಿ ವತಿಯಿಂದ ಜರುಗಿದ್ದು, ಹೊಂಗಸಂದ್ರದಲ್ಲಿ3 ಒತ್ತುವರಿಗಳ ಪೈಕಿ 7.5 ಮೀಟರ್ ಜಾಗದಲ್ಲಿ 160 ಚ.ಅ. ಯಷ್ಟು1 ಕಟ್ಟಡ, 10 ಅಡಿಯ ಕಾಂಪೌಂಡ್ ಗೋಡೆ ಹಾಗೂ 4×10 ರ ಶೆಡ್‌ನ್ನು 1 ಜೆಸಿಬಿ ಹಾಗೂ 10 ಸಿಬ್ಬಂದಿಯ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.

ಹೊಂಗಸಂದ್ರ ವಾರ್ಡ್ 189ರ ವಿವೇಕಾನಂದ ನಗರ, ಬರಿಯಲ್ ಗ್ರೌಂಡ್ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಯಿತು. ಈ ರಾಜಕಾಲುವೆ ಬೊಮ್ಮನಹಳ್ಳಿ ಆಕ್ಸ್ಫರ್ಡ್ ಕಾಲೇಜು ಸಮೀಪ ಸಂಪರ್ಕ ಪಡೆದಿದ್ದು, ಕಳೆದ ಭಾರಿ ಮಳೆ ಬಂದಾಗ ನೀರಿನ ಸರಾಗ ಹರಿವಿಗೆ ತೊಂದರೆ ಉಂಟಾಗಿ ಜನ ಸಂಕಷ್ಟಕ್ಕೀಡಾದರು. ಇಂದು ನಡೆದ ಕಾರ್ಯಾಚರಣೆಯಲ್ಲಿ ಸೆಕ್ಯೂರಿಟಿ ಶೆಡ್‌ನ್ನು ತೆರವುಗೊಳಿಸಲಾಯಿತು.

ಈ ಕಾರ್ಯಾಚರಣೆಯು ಮುಂದುವರೆಯಲಿದ್ದು, 16 ಕಡೆ ರಾಜಕಾಲುವೆ ತೆರವುಗೊಳಿಸಲು ಪಟ್ಟಿ ಸಿದ್ದಗೊಳಿಸಲಾಗಿದೆ ಎಂದು ವಲಯ ಆಯುಕ್ತ ಹರೀಶ್ ಕುಮಾರ್ ತಿಳಿಸಿದರು. ಬೊಮ್ಮನಹಳ್ಳಿ ವಲಯದಲ್ಲಿ ಯಾವುದೇ ಅಪಾರ್ಟ್ಮೆಂಟ್‌ಗಳಾಗಲೀ, ಬೃಹತ್ ಕಟ್ಡಗಳಾಗಳಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿಲ್ಲ. ಸಣ್ಣ – ಪುಟ್ಟ ಮನೆಗಳು, ಕಾಂಪೌಂಡ್‌ಗಳನ್ನು ನಿರ್ಮಿಸಿದ್ದು, ಚುರುಕು ಕಾರ್ಯಾಚರಣೆ ನಡೆಸಲಾಗುವುದೆಂದು ತಿಳಿಸಿದರು.

ಈ ಕಾರ್ಯಾಚರಣೆಯಲ್ಲಿ ಜಂಟಿ ಆಯುಕ್ತ ಕೃಷ್ಣಮೂರ್ತಿ, ಎಕ್ಸಿಕ್ಯೂಟಿವ್ ಇಂಜಿನಿಯರ್ ಶೇಷಾದ್ರಿ, ಎಇ ವಿಕ್ರಾಂತ್, ಎಇಇ ಹನುಮಂತರಾಯಪ್ಪರವರುಗಳು ಪಾಲ್ಗೊಂಡಿದ್ದರು.

Related