ತೋಟಗಾರಿಕೆ ಕ್ಷೇತ್ರದಲ್ಲಿದೆ ಉದ್ಯೋಗವಕಾಶ

ತೋಟಗಾರಿಕೆ ಕ್ಷೇತ್ರದಲ್ಲಿದೆ ಉದ್ಯೋಗವಕಾಶ

ಕೊಪ್ಪಳ : ತೋಟಗಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗವಕಾಶ ವಿದ್ದು, ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡ ವಿದ್ಯಾವಂತ ಯುವಕ-ಯುವತಿಯರು ತೋಟಗಾರಿಕೆ ತೊಡಗಿಸಿಕೊಂಡರೆ.

ಉತ್ತಮ ಅವಕಾಶ ಮತ್ತು ಆದಾಯ ಪಡೆಯಬಹುದಾಗಿದೆ ಎಂದು ಕಲಬುರಗಿ ವಿಭಾಗೀಯ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ ದಿಡ್ಡಿಮನಿ ಹೇಳಿದರು.

ಆಗಸ್ಟ್ 10 ರಂದು ನಗರದ ತೋಟಗಾರಿಕೆ ಇಲಾಖೆಯ ಸಭಾಂಗಣದಲ್ಲಿ ದಿ. ಡಾ.ಎಂ.ಎಚ್. ಮರಿಗೌಡರ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ತೋಟಗಾರಿಕೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಮೊದಲು ತೋಟಗಾರಿಕೆ ಎಂದರೆ ಕೇವಲ ತೆಂಗಿನ ಬೆಳೆ, ಮಾವಿನ ಬೆಳೆಗಳಿಗೆ ಮಾತ್ರ ಸೀಮಿತವಾಗಿತ್ತು. ಡಾ. ಎಮ್. ಎಚ್. ಮರಿಗೌಡರವರು ತೋಟಗಾರಿಕೆಯ ವೈವಿಧ್ಯಮಯ ಬೆಳೆಗಳ ಬಗ್ಗೆ ಬೆಳಕು ಹರಿಸಿ, ರೈತರಿಗೆ ಲಾಭದಾಯಕ ಕೃಷಿಯಲ್ಲಿ ತೋಟಗಾರಿಕೆಯ ಪ್ರಮುಖ ಪಾತ್ರದ ಬಗ್ಗೆ ತಿಳಿಸಿಕೊಟ್ಟರು.

ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ|| ಕವಿತಾ ಉಳ್ಳಿಕಾಶಿರವರು ಅಣಬೆ ಕೃಷಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು ಮತ್ತು ರೈತರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.

Related