ಕಾಡನೆ ಆನೆ ದಾಳಿ ಬಾಳೆ ಫಸಲು ನಾಶ

ಕಾಡನೆ ಆನೆ ದಾಳಿ ಬಾಳೆ ಫಸಲು ನಾಶ

ಪಿರಿಯಾಪಟ್ಟಣ : ಕಾಡಂಚಿನ ಜಮೀನಿಗೆ ರಾತ್ರೋರಾತ್ರಿ ಕಾಡನೆಗಳ ಹಿಂಡು ದಾಳಿ ನಡೆಸಿ ತೋಟದಲ್ಲಿ ನಡೆಸಿ ಲಕ್ಷಾಂತರ ಮೌಲ್ಯದ ಬಾಳೆ, ಸಿಲ್ವರ್, ಬಟರ್ ಫ್ರೂಟ್ ತೆಂಗು ಸೇರಿದಂತೆ ಇನ್ನಿತರ ಫಸಲನ್ನು ತಿಂದು ತುಳಿದು ನಾಶ ಮಾಡಿರುವ ಘಟನೆ  ನಡೆದಿದೆ.

ತಾಲೂಕಿನ ಬೆಮ್ಮತ್ತಿ ಕೆಂಪಯ್ಯನ ಕೊಪ್ಪಲು ಗ್ರಾಮದ ರೈತ ಶಿವಣ್ಣ ಎಂಬುವರಿಗೆ ಸೇರಿದ ಮೂರು ಎಕರೆ ಜಮೀನಿನಲ್ಲಿ ಹುಲುಸಾಗಿ ಬೆಳೆದಿದ್ದ ಬಾಳೆ ತೋಟಕ್ಕೆ ರಾತ್ರಿವೇಳೆ ಕಾಡನೆಗಳು ತೋಟದ ಸುತ್ತಲು ಹಾಕಿದ್ದ ಸೋಲರ್ ಬೇಲಿಯನ್ನು ಕತ್ತೆಸೆದು ಫಸಲನ್ನು ತಿಂದು ತುಳಿದು ನಾಶ ಮಾಡಿವೆ.

ಕಾಡಿನಲ್ಲಿ ಆಹಾರ ಕೊರತೆಯಾದ ಸಂದರ್ಭಗಳಲ್ಲಿ ರೈತರು ಬೆಳೆದ ಜಮೀನಿನತ್ತ ಧಾವಿಸಿ ಬೆಳೆಗಳನ್ನು ನಾಶ ಮಾಡುತ್ತಿರುತ್ತವೆ. ಕಳೆದ ವಾರವಷ್ಟೆ ಆನೆಗಳು ರೈತರ ಜಮೀನುಗಳಿಗೆ ನುಗ್ಗಿ ರೈತರು ಬೆಳೆದಿದ್ದ ಟಮೋಟೋ, ಬಾಳೆ, ಮಾವು, ಸಿಲ್ವರ್, ತೆಂಗು ನಾಶ ಮಾಡಿದ್ದವು ಆದರೂ ಅರಣ್ಯ ಇಲಾಖೆ ರಾತ್ರಿ ಗಸ್ತು ತಿರುಗಲು ಉಡಾಫೆ ಮಾಡಿದ್ದರಿಂದ ರೈತರು ಸಾಲ ಸೋಲ ಮಾಡಿ ಬೆಳೆದಂತಹ ಬೆಳೆ ಕ್ಷರ್ಣಾದಲ್ಲಿ ಆನೆಗಳ ಪಾಲಾಗುತ್ತಿದೆ.

ಬಂದೂಕು ಇದ್ದಿದ್ದರೆ ಬೆದರು ಗುಂಡು ಹೊಡೆದು ಆನೆಗಳ ಹಿಂಡನ್ನು ಬೆದರಿಸಿ ಹಿಮ್ಮೆಟ್ಟಿಸಬಹುದಿತ್ತು ಆದರೆ ಇವರು ವಾಪಾಸ್ ಪಡೆದಿರುವುದರಿಂದ ಆನೆಗಳ ಹಾವಲಿ ಹೆಚ್ಚಾಗುತ್ತಿದೆ ಎಂದು ಶಿವಣ್ಣ ಅರಣ್ಯ ಇಲಾಖೆಯವರ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದಾರೆ.

Related