ಕಾಂಗ್ರೆಸ್ ಮುಖಂಡನ ಮನೆ ಮೇಲೆ ಇಡಿ ದಾಳಿ

  • In State
  • October 19, 2023
  • 110 Views
ಕಾಂಗ್ರೆಸ್ ಮುಖಂಡನ ಮನೆ ಮೇಲೆ ಇಡಿ ದಾಳಿ

ಕಲಬುರಗಿ: ಮೊನ್ನೆ ತಾನೆ ಸಿಲ್ಕಾನ್ ಸಿಟಿ ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದರು. ಇದೀಗ ಮತ್ತೆ ಕರ್ನಾಟಕದಲ್ಲಿ ಇಡಿ ಸದ್ದು ಜೋರಾಗಿದ್ದು ಇಂದು ಕಲ್ಬುರ್ಗಿ ನಗರದಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹೌದು, ಕರ್ನಾಟಕದಲ್ಲಿ ಮತ್ತೆ ಇಡಿ ದಾಳಿ ಮುಂದುವರೆದಿದೆ, ಮೊನ್ನೇ ಅಷ್ಟೇ ಬೆಂಗಳೂರಿನ ಉದ್ಯಮಿಯೊಬ್ಬರ ಮನೆ ಮೇಲೆ ದಾಳಿಯಾಗಿತ್ತು. ಇಂದು(ಅಕ್ಟೋಬರ್ 19) ಕಲಬುರಗಿ ಕಾಂಗ್ರೆಸ್​ ಮುಖಂಡನ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚಿಂಚೋಳಿ ಸಕ್ಕರೆ ಕಾರ್ಖಾನೆ‌‌ ಅಕ್ರಮ ಆರೋಪ ಹಾಗೂ ರೈತರಿಂದ ಜಮೀನು ಖರೀದಿಸಿ ಹಣ ನೀಡದೆ ವಂಚಿಸಿರುವ ಆರೋಪದ ಮೇಲೆ ದಾಳಿಯಾಗಿದ್ದು, ಚಿಂಚೋಳಿ ಪಟ್ಟಣದ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

Related