ಬೇಸಿಗೆಯಲ್ಲಿ ಹೊಟ್ಟೆ ತಂಪಾಗಿರಲು ಈ ಹಣ್ಣನ್ನು ಸೇವನೆ ಮಾಡಿ..!

ಬೇಸಿಗೆಯಲ್ಲಿ ಹೊಟ್ಟೆ ತಂಪಾಗಿರಲು ಈ ಹಣ್ಣನ್ನು ಸೇವನೆ ಮಾಡಿ..!

ಅಬ್ಬಬ್ಬಾ ಏನು ಬಿಸಿಲು …. ಈ ಶಕೆ ತಡೆಯೋಕೆ ಆಗುತ್ತಿಲ್ಲ… ಎನ್ನುತ್ತಿದ್ದಾರೆ ಎಲ್ಲಾ ಜನರು.

ಹೌದು, ಪ್ರತಿ ವರ್ಷದಂತೆ ಈ ವರ್ಷ ಬೇಸಿಗೆ ಕಾಲದಲ್ಲಿ ಹೆಚ್ಚು ಸೆಕೆಯಾಗುತ್ತಿರುವುದರಿಂದ ಜನರು ಹೈರಾಣ ಆಗಿದ್ದಾರೆ.

ಇನ್ನು ಶಕೆ, ಬಿಸಿಲು ಹೆಚ್ಚಾಗಿತ್ತಿರುವುದರಿಂದ ಜನರು ತಂಪು ಪಾನೀಯ ಮತ್ತು ಇನ್ನಿತರ ಕೆಮಿಕಲ್ ಮಿಶ್ರೀತ ತಂಪು ಪಾನೀಯ ಗಳಿಗೆ ಮಾರುಹೋಗುತ್ತಿದ್ದಾರೆ.

ಆದರೆ ತಂಪು ಪಾನೀಯ ಸೇವನೆಯಿಂದ ನಮ್ಮ ದೇಹದಲ್ಲಿ ಅಡ್ಡ ಪರಿಣಾಮಗಳಾಗುತ್ತವೆ ಎಂದು ಕೆಲವರಿಗೆ ಗೊತ್ತಿರುವುದಿಲ್ಲ.

ಹಾಗಾಗಿ ಫ್ರೆಶ್ ಜ್ಯೂಸ್ ಕುಡಿಯೋದು ಈ ಬೇಸಿಗೆ ಕಾಲದಲ್ಲಿ ನಮ್ಮ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ನಮ್ಮ ಚರ್ಮದ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

ಸುಲಭವಾಗಿ ಮತ್ತು ಕಡಿಮೆ ಬೆಲೆಯಲ್ಲಿ ಸಿಗುವ ಕರ್ಬುಜ ಹಣ್ಣನ್ನು ಸೇವಿಸುವುದರಿಂದ ಈ ಬೇಸಿಗೆ ಕಾಲದಲ್ಲಿ ನಮ್ಮ ದೇಹಕ್ಕೆ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂದು ವೈದ್ಯರು ತಿಳಿಸುತ್ತಾರೆ.

*ಕರ್ಬೂಜ ಹಣ್ಣಿನಲ್ಲಿ ನೀರಿನಂಶ ಹೆಚ್ಚಾಗಿರುವುದರಿಂದ ಈ ಬಿಸಿಲು ಕಾಲದಲ್ಲಿ ನಮ್ಮ ದೇಹದಲ್ಲಿ ಉಂಟಾಗುವ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ.

*ಕರ್ಬೂಜದ ಹಣ್ಣಿನ ಜೊತೆ ಸ್ವಲ್ಪ ಸಕ್ಕರೆ, ಪುದಿನ, ಸಬ್ಜಾ ಸೀಡ್ಸ್ ಇವೆಲ್ಲವನ್ನು ಸೇರಿಸಿ ಜ್ಯೂಸ್ ಮಾಡಿ ಸೇವನೆ ಮಾಡುವುದರಿಂದ ನಮಗೆ ಈ ಬೇಸಿಗೆಯಲ್ಲಿ ಉಂಟಾಗುವ ಕಣ್ಣು ಉರಿ ಮತ್ತು ಮೂತ್ರ ಉರಿ ಕಡಿಮೆಯಾಗುತ್ತದೆ.

ಇನ್ನು ಈ ಕರ್ಬೂಜವನ್ನು ನಾವು ಈ ಬಿಸಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸೇವನೆ ಮಾಡುವುದರಿಂದ ನಮ್ಮ ಚರ್ಮದ ರಕ್ಷಣೆಯನ್ನು ಕೂಡ ಮಾಡುತ್ತದೆ.

ಖರ್ಬೂಜ ಹಣ್ಣು ಅಥವಾ ಪಾನಕವನ್ನು ಸೇವನೆ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆಯ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ. ಏಕೆಂದರೆ ಇದರಲ್ಲಿ ಫೈಬರ್‌ ಶ್ರೀಮಂತವಾಗಿದೆ.

ಇದು ಮಲಬದ್ಧತೆಯನ್ನು ತಡೆಯಲು ಸಾಕಷ್ಟು ಸಹಾಯ ಮಾಡುತ್ತದೆ. ಖರ್ಬೂಜ ಹಣ್ಣು ಅಥವಾ ಜ್ಯೂಸ್‌ ಸೇವನೆಯಿಂದ ಕರುಳಿನ ಚಲನೆಯನ್ನು ನಿಯಂತ್ರಿಸಲು ಉತ್ತೇಜಿಸುತ್ತದೆ.

 

Related