ಆನ್‌ಲೈನ್ ಕ್ಲಾಸ್‌ಗಾಗಿ ಕಿವಿ ಓಲೆ ಮಾರಾಟ

ಆನ್‌ಲೈನ್ ಕ್ಲಾಸ್‌ಗಾಗಿ ಕಿವಿ ಓಲೆ ಮಾರಾಟ

ಬೆಳಗಾವಿ : ಆನ್‌ಲೈನ್ ಶಿಕ್ಷಣಕ್ಕಾಗಿ. ತನ್ನ ಕಿವಿಯೋಲೆಯನ್ನು ಮಾರಿ ಮಗಳ ಶಿಕ್ಷಣಕ್ಕಾಗಿ ದೇವದಾಸಿವೋರ್ವಳು ಮಗಳ ತಾಯಿ ಮೊಬೈಲ್ ಕೊಡಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ನಗರದ ಕ್ಲಬ್ ರಸ್ತೆಯಲ್ಲಿ ರೈಲ್ವೆ ಇಲಾಖೆಗೆ ಸೇರಿದ ಶೆಡ್‌ನಲ್ಲಿ ವಾಸವಿರುವ ಸರೋಜಿನಿ ಬೇವಿನಕಟ್ಟಿ ಅವರು ಕಿವಿಯೋಲೆ ಮಾರಿರುವ ಮಹಿಳೆಯಾಗಿದ್ದು, ಈಕೆಯ ಪುತ್ರಿ ರೇಣುಕಾ ಬೇವಿನಕಟ್ಟಿ ಸರ್ದಾರ್ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆಯ ಶಿಕ್ಷಣಕ್ಕಾಗಿ ಶಿಕ್ಷಕರ ಸಲಹೆ ಹಾಗೂ ಮಗಳ ಒತ್ತಾಯದ ಮೇರೆಗೆ ತಾಯಿಯು ಕಿವಿಯೋಲೆ ಮಾರಿ ಪುತ್ರಿಗೆ ಮೊಬೈಲ್ ಕೊಡಿಸಿದ್ದಾರೆ ಎನ್ನಲಾಗಿದೆ.

Related