ಪಂಚಭೂತಗಳಲ್ಲಿ ಲೀನರಾದ ದ್ವಾರಕೀಶ್

ಪಂಚಭೂತಗಳಲ್ಲಿ ಲೀನರಾದ ದ್ವಾರಕೀಶ್

ಬೆಂಗಳೂರು: ಪಂಚಭೂತಗಳಲ್ಲಿ ಲೀನರಾದ ಕನ್ನಡದ ಪ್ರಚಂಡ ಕುಳ್ಳ ದ್ವಾರಕೇಶ್. ಹೃದಯಾಘಾತದಿಂದ ನಿನ್ನೆ (ಮಂಗಳವಾರ ಏಪ್ರಿಲ್ )16ರಂದು ಬೆಂಗಳೂರಿನಲ್ಲಿ ದ್ವಾರಕೀಶ್ ಅವರು ಕೊನೆ ಉಸಿರೆಳೆದಿದ್ದಾರೆ.

ಇಂದು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ನೆರವೇರಿಸಲಾಗಿದ್ದು ಕನ್ನಡ ಚಿತ್ರರಂಗದ ನಟ ನಟಿಯರು ಮತ್ತು ರಾಜಕೀಯ ಘಟಾನು ಘಟಿಗಳು ದ್ವಾರಕೀಶ್ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಬ್ರಾಹ್ಮಣರ ಸಾಂಪ್ರದಾಯದಂತೆ ದ್ವಾರಕೀಶ್ ಅವರ ಅಂತ್ಯಕ್ರಿಯೆ ನೆರವೇರಿದ್ದು ಬೆಂಗಳೂರಿನ ಬೆಂಗಳೂರಿನ ಟಿ.ಆರ್ ಮೀಲ್ ನಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ಇನ್ನು ಚಿತೆಗೆ ಅಗ್ನಿಸ್ಪರ್ಷಕ್ಕೂ ಮುನ್ನ ಪೊಲೀಸ್ ಇಲಾಖೆಯು ಪೊಲೀಸ್ ಗೌರವವನ್ನು ಸಲ್ಲಿಸಲಾಯಿತು. ನಂತರ ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಮೊದಲಿಗೆ ಪ್ರೇತ ಸಂಸ್ಕಾರ. ಆನಂತರ ಕಿವಿಯಲ್ಲಿ ನಾರಾಯಣ ಸ್ಮರಣೆ. ಚಿತಾ ಅಗ್ನಿ ಹೋಮದ ನಂತರ ಚಿತಾ ಶುದ್ಧಿ, ಭೂ ಸ್ಪರ್ಶ ದಹನ ಮಾಡಿ, ಆಮೇಲೆ ಅಗ್ನಿ ದಿಗ್ಬಂಧನ ಮಾಡಲಾಯಿತು.

 

Related