ದುಷ್ಮನ್ ಕಹಾ ಹೈ? ಬಗಲ್ ಮೇ ಹೈ

ದುಷ್ಮನ್ ಕಹಾ ಹೈ? ಬಗಲ್ ಮೇ ಹೈ

ಬೆಂಗಳೂರು, ಫೆ. 21 : ಪಾಕ್ ಅಂದಾಕ್ಷಣ ಥಟ್ಟನೆ ನೆನಪಾಗೋದು ಸದಾ ಕಾಲು ಕೆರೆದು ಜಗಳ ಮಾಡೋ ಧೋರಣೆ, ಭಯೋತ್ಪಾದಕ ಚಟುವಟಿಕೆಗೆ ಕುಮ್ಮಕ್ಕು ನೀಡೋ ಅದರ ನೀತಿ, ಗಡಿ ನಿಯಮಗಳ ಉಲ್ಲಂಘನೆ, ಉಗ್ರಗಾಮಿ ನಿಲುವು, ಯದ್ಧ ಪ್ರಚೋದನೆ, ಹೀಗೆ ಇಂಥ ಪಾಕಿಸ್ತಾನ ಭಾರತದೊಂದಿಗೆ ಯಾವತ್ತೂ ತನ್ನ ಸಂಬಂಧವನ್ನ ಅನ್ಯೋನ್ಯವಾಗಿಟ್ಟುಕೊಂಡಿಲ್ಲ. “ದುಷ್ಮನ್ ಕಹಾ ಹೈ? ಬಗಲ್ ಮೇ ಹೈ” ಎಂಬಂತೆ ಹುಬ್ಬಳ್ಳಿಯಲ್ಲಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿ ಜೈಲು ಪಾಲಾದ ಘಟನೆಯ ಬೆನ್ನಲ್ಲೇ ಬೆಂಗಳೂರಿನಲ್ಲೂ ಪಾಕ್ ಪರ ಘೋಷಣೆ ಕೇಳಿ ಬಂದಿದೆ. ಫ್ರೀಡಂ ಪಾರ್ಕ್ನಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟನೆ ವೇಳೆ ಯುವತಿಯೊಬ್ಬಳು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದಾಳೆ. ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ದೇಶ ವಿರೋಧಿ ಘೋಷಣೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ನಗರದ ಉಪ್ಪಾರಪೇಟೆ ಠಾಣೆ ಪೊಲೀಸರು ದೇಶದ್ರೋಹ, ಬೇರೆ ಬೇರೆ ಸಮುದಾಯಗಳ ನಡುವೆ ಧ್ವೇಷ ಭಾವನೆ ಬಿತ್ತುವುದು,ರಾಷ್ಟ್ರೀಯ ಭಾವೈಕ್ಯತೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಮೂಲ್ಯ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಶಿವಪುರದವಳು. ಈಕೆಯ ತಂದೆ ವಾಜಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷದಲ್ಲೂ ಗುರುತಿಸಿಕೊಂಡಿದ್ದರು. ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದನ್ನು ವಿರೋಧಿಸಿ ಬಿಜೆಪಿ ಮುಖಂಡ ರಾಕೇಶ್ ಹಿರೆಕೊಡಿಗೆ ನೇತೃತ್ವದಲ್ಲಿ ಮನೆಗೆ ತೆರಳಿ ತಂದೆ ವಾಜಿ ಬಳಿ ‘ಭಾರತ್ ಮಾತಾಕಿ ಜೈ’ ಎಂದು ಘೋಷಣೆ ಕೂಗಿಸಿದರು. ನಿಮ್ಮ ಮಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ಸರಿಯೇ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಮಗಳ ಬಗ್ಗೆ ತಂದೆ ಕೂಡ ಆಕ್ರೋಶ ವ್ಯಕ್ತಪಡಿಸಿದರು. ನನ್ನ ಮಗಳು ಮಾಡಿರುವುದು ತಪ್ಪು. ನಾನು ಹೇಳಿದ ಮಾತನ್ನು ಆಕೆ ಕೇಳುತ್ತಿರಲಿಲ್ಲ. ಸಿಎಎ ವಿರುದ್ಧ ಹೋರಾಟಕ್ಕೆ ಹೋಗಬೇಡ ಎಂದಿದ್ದೆ. ಆದರೆ ಕೆಲವರ ಜತೆ ಸೇರಿಕೊಂಡು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾಳೆ ಎಂದು ಮಗಳ ನಡವಳಿಕೆಯನ್ನು ಖಂಡಿಸಿದರು. ಪೊಲೀಸರು ಆಕೆಯ ವಿರುದ್ಧ ಯಾವ ಕ್ರಮ ಕೈಗೊಂಡರೂ ನನ್ನ ಅಭ್ಯಂತರವಿಲ್ಲ ಎಂದರು.

Related