ಗೆಲುವಿನತ್ತ ದಾಪುಗಾಲಿಟ್ಟ ಡಂಕಿ ಚಿತ್ರ

  • In Cinema
  • December 27, 2023
  • 78 Views
ಗೆಲುವಿನತ್ತ ದಾಪುಗಾಲಿಟ್ಟ ಡಂಕಿ ಚಿತ್ರ

ಬಾಲಿವುಡ್ ನಲ್ಲಿ ಇತ್ತೀಚೆಗೆ ಶಾರುಖಾನ್ ನಟನೆಯ ಡಂಕಿ ಚಿತ್ರ ತರೆ ಕಂಡಿದ್ದು ತೆಲುಗು ಚಿತ್ರದ ಪ್ರಭಾಸ್ ನಟನೆಯ  ಸಲಾರ್‌ ಸಿನಿಮಾದ ಮುಂದೆ ಡಂಕಿ ಚಿತ್ರ ಸೋಲುತ್ತಾ ಎಂಬ ಪ್ರಶ್ನೆ ಎಲ್ಲರ ಶಾರುಖಾನ್ ಅಭಿಮಾನಿಗಳ ಮನದಲ್ಲಿ ಮುಡಿತ್ತು. ಆದರೆ ಈಗ ಡಂಕಿ ಚಿತ್ರ ಸಲಾರ್ ಸಿನಿಮಾದ ಮುಂದೇನೆ ತನ್ನ ಪಾಡಿಗೆ ತಾನು ಎಂದಂತೆ ಗೆಲುವಿನತ್ತ ತನ್ನ ದಾಪುಗಾಲನ್ನಿಟ್ಟಿದೆ.

ಡಂಕಿ ಸಿನಿಮಾದ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಂತೆ, ವಾರಂತ್ಯಕ್ಕೆ ಡಂಕಿ ಗಳಿಸಿದ್ದು 211.13 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದೆ.

ಒಂದು ಕಡೆ ಸಿನಿಮಾ ಕೋಟಿ ಕೋಟಿ ಗಳಿಸುತ್ತಿದ್ದರೆ, ಮತ್ತೊಂದು ಕಡೆ ಪೈರಸಿ ಹಾವಳಿ ಕೂಡ ಚಿತ್ರದ ಹಿನ್ನೆಡೆಗೆ ಕಾರಣವಾಗುತ್ತಿದೆ. ಡಂಕಿ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ನೆಚ್ಚಿನ ನಟನ ಸಿನಿಮಾವನ್ನು ಶಾರುಖ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಎಲ್ಲ ಕಡೆ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಈ ನಡುವೆ ಡಂಕಿ ಸಿನಿಮಾ ಪೈರಸಿಗೆ ತುತ್ತಾಗಿದೆ. ಹಲವು ವೆಬ್ ಸೈಟ್ ಗಳಲ್ಲಿ ಡಂಕಿ ಸಿನಿಮಾದ ಪೈರಸಿಯನ್ನು ಅಪ್ ಲೋಡ್ ಮಾಡುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಲಾಗಿದೆ.

ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದು ಮಾತ್ರವಲ್ಲ, ಮುಕ್ಕಾಲು ಭಾಗ ಸಿನಿಮಾವನ್ನು ಎಕ್ಸ್ (ಟ್ವೀಟರ್) ನಲ್ಲಿ ಲೈವ್ ಕೂಡ ಮಾಡಿರುವ ವಿಷಯ ಹರಿದಾಡುತ್ತಿದೆ. ಹೀಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಹೊಡೆತ ಬಿದ್ದಿದೆ. ಪೈರಸಿಯನ್ನು ತೆಗೆದು ಹಾಕಿಸುವಲ್ಲಿ ನಿರ್ಮಾಪಕರು ಹರಸಾಹಸ ಪಡುತ್ತಿದ್ದಾರೆ.

 

Related