ಡ್ರಗ್ಸ್ : ಚಿತ್ರರಂಗದ ಹೆಣ್ಣು ಮಕ್ಕಳೆ ಫಿಕ್ಸ್?

ಡ್ರಗ್ಸ್ : ಚಿತ್ರರಂಗದ ಹೆಣ್ಣು ಮಕ್ಕಳೆ ಫಿಕ್ಸ್?

ಮೈಸೂರು : ಡ್ರಗ್ಸ್ ದಂಧೆಯಲ್ಲಿ ಬರೀ ಚಿತ್ರರಂಗದವರನ್ನೇ, ಅದರಲ್ಲೂ ಹೆಣ್ಣು ಮಕ್ಕಳನ್ನೇ ಫಿಕ್ಸ್ ಮಾಡಲಾಗುತ್ತಿದೆ. ಈ ಬಗ್ಗೆ ನನಗೆ ವಿಷಾದವಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಮೈಸೂರಿನಲ್ಲಿ ಮಾತನಾಡಿ, ಇಷ್ಟವಿಲ್ಲದ ಹಲವಾರು ಕೆಲಸಗಳನ್ನು ಮಾಡುವಂತೆ ಹೆಣ್ಣು ಮಕ್ಕಳ ಮೇಲೆ ಒತ್ತಡಗಳು ಬರುತ್ತಿವೆ. ಹೀಗಾಗಿ ಇಂಥ ಕೃತ್ಯಗಳಿಗೆ ಮೊರೆ ಹೋಗುತ್ತಿದ್ದಾರೆ ಎಂದರು.

‘ಪೊಲೀಸರಿಗೆ ಎಲ್ಲಾ ವಿಚಾರ ಗೊತ್ತಿದೆ. ಗಾಂಜಾ, ಪಾರ್ಟಿ, ಅಫೀಮು ಹೊಸ ವಿಚಾರವೇನಲ್ಲ. ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಏನು ನಡೆಯುತ್ತಿದೆ ಎಂಬುದು ಚೆನ್ನಾಗಿ ಗೊತ್ತಿದೆ’ ಎಂದು ಹೇಳಿದರು.

Related