ಬಿಗ್ ಬಾಸ್ ನಲ್ಲಿ ಗೆದ್ದ ಬೈಕ್ ಅನ್ನು ಡ್ರೋನ್ ಪ್ರತಾಪ್ ನೀಡಿದ್ಯಾರಿಗೆ

ಬಿಗ್ ಬಾಸ್ ನಲ್ಲಿ ಗೆದ್ದ ಬೈಕ್ ಅನ್ನು ಡ್ರೋನ್ ಪ್ರತಾಪ್ ನೀಡಿದ್ಯಾರಿಗೆ

ಬೆಂಗಳೂರು: ಬಿಗ್ ಬಾಸ್ ಸೀಸನ್ 10ರಲ್ಲಿ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಹೇಳಿದಂತೆ ಅಕಸ್ಮಾತಾಗಿ ನಾನೇನಾದರೂ ಬಿಗ್ ಬಾಸ್ ನಲ್ಲಿ ವಿನ್ ಆದರೆ ಬರುವ ಹಣವನಲ್ಲ ಇನ್ನಿತರ ಕೆಲಸಗಳಿಗೆ ಬಳಸುತ್ತೇನೆ ಎಂದು ಹೇಳಿದರು. ಈಗ ಅದರಂತೆ ಬಿಗ್ ಬಾಸ್ ನಲ್ಲಿ ರನ್ನರ್ ಅಪ್ ಆಗಿ 10 ಲಕ್ಷ ಬಹುಮಾನ ಮತ್ತು ಒಂದು ಎಲೆಕ್ಟ್ರಿಕಲ್ ಬೈಕನ್ನು ಬಹುಮಾನವಾಗಿ ಗೆದ್ದುಕೊಂಡಿದ್ದರು. ಇನ್ನು ಎಲೆಕ್ಟ್ರಿಕ್ ಬೈಕನ್ನು ಅಗತ್ಯವಿರುವ ಯುವಕನೊಬ್ಬನಿಗೆ ನೀಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯುವಕನೊಬ್ಬನಿಗೆ ಬೈಕ್ ನೀಡುತ್ತಿರುವ ಚಿತ್ರ ಹಂಚಿಕೊಂಡಿರುವ ಡ್ರೋನ್ ಪ್ರತಾಪ್, ‘ಬಿಗ್‌ಬಾಸ್ ನಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ಹೇಳಿದ ಹಾಗೆ ಯಾರಿಗೆ ನೀಡಿದೆ ಅನ್ನುವುದಕ್ಕೆ ಉತ್ತರ ಇಲ್ಲಿದೆ. ಇವರು ರಾಜು ಅಂತ ಮಧ್ಯಾಹ್ನದಿಂದ ಸಂಜೆ ವರೆಗೂ ಹೋಟಲ್ ನಲ್ಲಿ ಕೆಲಸ ಮಾಡಿ‌ ಹಾಗೂ ಸಂಜೆಯ ಮೇಲೆ ಫುಡ್ ಡೆಲಿವರಿ ಕೆಲಸ ಮಾಡುತ್ತಾರೆ ಮತ್ತು ಇವರು ತಮ್ಮ ಸ್ನೇಹಿತರ ಹೆಸರಲ್ಲಿ ಗಾಡಿಯನ್ನು ತೆಗೆದುಕೊಂಡು ಅದಕ್ಕೆ ತಿಂಗಳು ತಿಂಗಳು ಕಂತು ಕಟ್ಟುತ್ತಿದ್ದರು ಆದರೆ ಅವರ ಸ್ನೇಹಿತ ಮಾಡಿದ ಮೋಸದಿಂದ ತಮ್ಮ ಬೈಕನ್ನು ಬ್ಯಾಂಕ್ ನವರು ಸೀಜ್ ಮಾಡಿದರು ಹಾಗಾಗಿ ಇವರಿಗೆ ನನಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕ್ ಗಾಡಿಯನ್ನು ನೀಡಿದು ನನಗೆ ತುಂಬಾ ಖುಷಿ ತಂದಿದೆ’ ಎಂದು ಬರೆದುಕೊಂಡಿದ್ದಾರೆ.

 

Related