ಆಜಾದ್ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ಆಜಾದ್ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ದೇಶಾದ್ಯಂತ ನಡೆಯುತ್ತಿರುವ ಆಜಾದ್ ಕಾ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು.
ಗುಜರಾತ್‌ನ ಸಬರಮತಿ ಆಶ್ರಮದಲ್ಲಿ ವರ್ಚುವಲ್ ವೇದಿಕೆ ಮೂಲಕ ಭಾರತದ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ದೇಶದ ಪಾಲಿಗೆ ಈ ವರ್ಷ ಐತಿಹಾಸಿಕವಾದದ್ದು, ಗಾಂಧಿ ಅವರ ದಂಡಯಾತ್ರೆ ಹೊಸ ಚರಿತ್ರೆಯನ್ನೆ ಸೃಷ್ಟಿ ಮಾಡಿತು. ಇಂದಿನಿಂದ  ಚರಕ ಅಭಿಯಾನವನ್ನು ಆರಂಭಿಸಲಾಗಿದೆ. ಉಪ್ಪು ನಮ್ಮ ಶ್ರಮದ ಪ್ರತೀಕ ಎಂದು ಹೇಳಿದರು.
ಸ್ವಾತಂತ್ರ‍್ಯ ಹೋರಾಟ, 75ರ ಐಡಿಯಾಗಳು, 75ರ ಸಾಧನೆಗಳು, 75ರ ಕ್ರಿಯೆ ಮತ್ತು ದೃಢಸಂಕಲ್ಪ ಎಂಬ ಈ ಐದು ಆಧಾರಸ್ತಂಭಗಳು ದೇಶದ ಏಳಿಗೆಗೆ ಸದಾ ಸ್ಫೂರ್ತಿಯಾಗಲಿದೆ ಎಂದು ಹೇಳಿದರು.

ಇಂದು ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಮೊದಲ ದಿನ. ಈ ಮಹೋತ್ಸವವನ್ನು 75 ವಾರಗಳ ಮುಂಚಿತವಾಗಿಯೇ ಆರಂಭವಾಗಿದೆ. ಈ ಮಹೋತ್ಸವ 2022ರ ಆಗಸ್ಟ್ 15ಕ್ಕೂ 75 ವಾರಗಳ ಮೊದಲು ಪ್ರಾರಂಭವಾಗಿದೆ ಮತ್ತು 2023ರ ಆಗಸ್ಟ್ 15ರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಇದೇ ವೇಳೆ ಕ್ವಿಟ್ ಇಂಡಿಯಾ ಚಳುವಳಿ ಬಗ್ಗೆ ಪ್ರಸ್ತಾಪಿಸಿ, ನಾವು ಮಂಗಲ್ ಪಾಂಡೆ, ತಾತ್ಯಾ ತೋಪೆ, ರಾಣಿ ಲಕ್ಷ್ಮಿ ಬಾಯಿ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಪಂ. ನೆಹರು, ಸ

Related