ಮದ್ಯ ಪ್ರಿಯರಿಗೆ ಶಾಕ್ : ಮಂಗಳವಾರದಿಂದ 3 ದಿನ ಬೆಂಗಳೂರಿನಲ್ಲಿ ಎಣ್ಣೆ ಸಿಗಲ್ಲ…!!

ಬೆಂಗಳೂರು, (ಮೇ.16): ಬೆಂಗಳೂರಿನಲ್ಲಿ ದಿಢೀರನೆ ಬಂದ್ ಆಗಲಿದೆ. ನಾಳೆಯಿಂದ ಮೂರು ದಿನಗಳ‌ಕಾಲ ಬೆಂಗಳೂರಲ್ಲಿ ಖರೀದಿಸಲು ಎಣ್ಣೆ ಸಿಗಲ್ಲ.
ಹೌದು…ಸರ್ಕಾರದ ಇ-ಇಂಡೆಎಂಟ್ ವಿರುದ್ಧ ಮದ್ಯದಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಾಜ್ಯದ ಹಲವೆಡೆ ಜಿಲ್ಲಾವಾರು ವಿಭಾಗಳಾಗಿ ವಿಂಗಡಿಸಿ ಪ್ರತ್ಯೇಕವಾಗಿ ಒಂದೊಂದು ದಿನ ಮದ್ಯ ಮಾರಾಟವನ್ನು ನಿಲ್ಲಿಸಲಾಗಿತ್ತು.ಇದೀಗ ಬೆಂಗಳೂರಿನ ಸರದಿ ಬಂದಿದ್ದು, ಇನ್ನೂ 3 ದಿನಗಳ ಕಾಲ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಮದ್ಯಪಾನ (Liquor) ಖರೀದಿ ಮಾಡದಿರಲು ನಿರ್ಧಾರ ಮಾಡಿದ್ದಾರೆ.


ರಾಜ್ಯ ಪಾನೀಯ ನಿಗಮ ಆರಂಭಿಸಿರುವ ಹೊಸ ಇ-ಇಂಡೆಂಟ್ ವ್ಯವಸ್ಥೆ ಇದಾಗಿದ್ದು, ಬಾರ್​, ವೈನ್ಸ್​ ಮಾಲೀಕರು ಆನ್​ಲೈನ್ ಮೂಲಕ ಮದ್ಯ ಖರೀದಿಸಬೇಕಾಗಿದೆ. ನಾಳೆಯಿಂದ(ಮಂಗಳವಾರ) 3 ದಿನ ಬೆಂಗಳೂರು ನಗರ, ಗ್ರಾಮಾಂತರದಲ್ಲಿ KSBLನಿಂದ ಮದ್ಯ ಖರೀದಿಸದಿರಲು ಮದ್ಯದಂಗಡಿ ಮಾಲೀಕರು ನಿರ್ಧಾರಕ್ಕೆ ಬಂದಿದ್ದಾರೆ.

Related