ರೈತರ ಹೊಲಗಳಿಗೆ ತಜ್ಞರ ತಂಡ ಭೇಟಿ ಸಲಹೆ

ರೈತರ ಹೊಲಗಳಿಗೆ ತಜ್ಞರ ತಂಡ ಭೇಟಿ ಸಲಹೆ

ಹಗರಿಬೊಮ್ಮನಹಳ್ಳಿ : ತಾಲೂಕಿನಲ್ಲಿ  ತುಂತುರು ಮಳೆ ವಾತಾವರಣದಿಂದ ಈರುಳ್ಳಿ ಬೆಳೆಯಲ್ಲಿ ಶಿಲೀಂದ್ರ ರೋಗಗಳ ಬಾದೆ ಹೆಚ್ಚಿರುತ್ತದೆ. ಚಿಬ್ಬುರೋಗ, ನರಳೆ ಮಚ್ಚೆ ರೋಗ ಸ್ಟೇಫೀಲಿಯಂ ಅಂಗಮಾರಿ ರೋಗ ಕಂಡು ಬರುವ ಸಾಧ್ಯತೆ ಇರುತ್ತದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯ ಸಸ್ಯರೋಗ ತಜ್ಞರಾದ ಡಾ. ರಾಘವೇಂದ್ರಚಾರಿ ತಿಳಿಸಿದರು.

ತಾಲೂಕಿನ ಉಪ್ಪಾರಗಟ್ಟಿ, ವರಲಹಳ್ಳಿ ಗ್ರಾಮಗಳ ರೈತರ ಹೊಲಗಳಿಗೆ ಭೇಟಿ ನೀಡುವ ಮೂಲಕ ಉಪಸ್ಥಿತರಿದ್ದ ರೈತರಿಗೆ ವಾತಾವರಣದಲ್ಲಿ ಬೇರೆ ಬೇರೆ ತೋಟಗಾರಿಕೆ ಬೆಳೆಗಳಿಗೆ ತಗುಲುವ ವಿವಿಧ ರೋಗಗಳ ಬಗ್ಗೆ ಕೀಟಾಗಳ ಬಗ್ಗೆ ಮಾತನಾಡಿದರು.

ಈರುಳ್ಳಿ, ದಾಳಿಂಬೆ, ಮೆಣಸಿನಗಿಡ, ಟೋಮೊಟೊ ರೋಗ ಲಕ್ಷಣಗಳಿಗೆ ಮುಂಜಾಗ್ರತೆ ವಹಿಸಬೇಕಾದ ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ತುದಿ ಸುಡುವ ರೋಗ, ತಿಗಣಿ ರೋಗ, ನೇರಳೆ ಮಚ್ಚೆರೋಗಗಳ ಲಕ್ಷಣ ಸಿಂಪರಣೆ ಮಾಡಬೇಕಾದ ಕೀಟಾನಾಶಕ ಔಷಧಿಗಳು ಬಳಕೆ ಮಾಡುವ ವಿಧಾನಗಳ ಬಗ್ಗೆ ತೋಟಗಾರಿಕೆ ಬೆಳೆಗಾರರರಿಗೆ ಮಾಹಿತಿ ನೀಡಿದರು.

Related