ದೇಣಿಗೆ ನೀಡಿದ ಪುನಿತ್ ರಾಜ್‌ಕುಮಾರ್

ದೇಣಿಗೆ ನೀಡಿದ ಪುನಿತ್ ರಾಜ್‌ಕುಮಾರ್

ಬೆಂಗಳೂರು, ಮಾ. 31:  ಕನ್ನಡ ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಇಂದು ಬೆಳಗ್ಗೆ ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಭೇಟಿ ಕೊಟ್ಟು, 50 ಲಕ್ಷ ರೂಪಾಯಿ ಚೆಕ್ ಅನ್ನು ಪುನೀತ್ ರಾಜ್ ಕುಮಾರ್ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಪುನೀತ್ ರಾಜ್ ಕುಮಾರ್, ”ಈಗಿರುವ ಪರಿಸ್ಥಿತಿಯಲ್ಲಿ ಸರ್ಕಾರ ಹೇಳುವುದನ್ನು ನಾವು ಕೇಳಲೇಬೇಕು. ಸಾಮಾಜಿಕ ಅಂತರವನ್ನು ನಾವು ಕಾಯ್ದುಕೊಳ್ಳಲೇಬೇಕು. ಮನೆಯಲ್ಲಿರುವುದಕ್ಕೆ ಕಷ್ಟ ಆಗಬಹುದು. ಆದರೆ, ಸ್ವಲ್ಪ ದಿನ ನಾವು ಇದನ್ನು ತಡೆದುಕೊಳ್ಳಬೇಕು. ಕೋವಿಡ್-19 ತಡೆಗಟ್ಟಲು ನಾವೆಲ್ಲರೂ ಕೈಜೋಡಿಸಬೇಕು” ಎಂದರು.

ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೈಗಾರಿಕೋದ್ಯಮಿಗಳು, ಕಾರ್ಪೊರೇಟ್ ಉದ್ಯಮಿಗಳು ಸರ್ಕಾರದ ಜೊತೆಗೆ ಕೈಜೋಡಿಸಿ, ಧನ ಸಹಾಯ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಪುನೀತ್ ರಾಜ್ ಕುಮಾರ್ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಡಿಸಿಎಂ ಮೆಚ್ಚುಗೆ

ಮಹಾಮಾರಿ ಕೋರೋನಾ ವೈರಸ್ ತಡೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡಲಾಗಿದೆ. ಮನವಿಗೆ ಓಗೊಟ್ಟು ಜನಸಾಮಾನ್ಯರು, ಸೆಲೆಬ್ರಿಟಿಗಳು, ಉದ್ಯಮಿಗಳು, ನೌಕರರು ಸೇರಿದಂತೆ ವಿವಿಧ ವಲಯಗಳಿಂದ ದೇಣಿಗೆ ನೀಡಲಾಗಿದೆ. ಅಂತೆಯೇ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾದ ಪುನೀತ್ ರಾಜ್ ಕುಮಾರ್ ಪರಿಹಾರ ನಿಧಿಗೆ ಚೆಕ್ ಹಸ್ತಾಂತರ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಕಾರ್ಯಕ್ಕೆ ಸಿಎಂ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ ನಾರಾಯಣ್ ಅವರು, ಪುನೀತ್ ರಾಜಕುಮಾರ್ ಸಂಕಷ್ಟದ ಸಮಯದಲ್ಲಿ ನಾಡಿನ ಹಿತಕ್ಕಾಗಿ ಸರ್ಕಾರದೊಂದಿಗೆ ಕೈ ಜೋಡಿಸಿ 50 ಲಕ್ಷ ರೂ. ನೀಡಿದ್ದಾರೆ. ಅವರಿಗೆ ಧನ್ಯವಾದಗಳು. ಸರ್ಕಾರದ ನಿಯಮಗಳನ್ನು ಪಾಲಿಸಿ, ನೀವು ನಮ್ಮೊಂದಿಗೆ ಸಹಕರಿಸಿ ಎಂದು ಹೇಳಿದ್ದಾರೆ.

Related