ಆಟೋ ಚಾಲಕಿನಿಗೆ ದೋಖಾ

ಆಟೋ ಚಾಲಕಿನಿಗೆ ದೋಖಾ

ಕೆಜಿಎಫ್ : ಆಟೋವಿನಲ್ಲಿ ಇಟ್ಟಿದ್ದ ಎಟಿಎಂ ಕಾರ್ಡಿನ ಮೇಲೆ ಪಿನ್ ನಂಬರ್ ಬರೆದಿಟ್ಟಿದ್ದ ಆಟೋ ಚಾಲಕರೊಬ್ಬರು 73680 ರೂಪಾಯಿ ಕಳೆದುಕೊಂಡಿದ್ದಾರೆ. ಚಲಿಗಾನಹಳ್ಳಿನ ಮಣಿ ಎಂಬುವರು ತಮ್ಮ ಆಟೋವಿನಲ್ಲಿ ಬಂಗಾರಪೇಟೆ ಎಸ್‌ಬಿಐ ನೀಡಿದ್ದ ಎಟಿಎಂ ಕಾರ್ಡ್ನ್ನು ಇಟ್ಟುಕೊಂಡಿದ್ದರು. ಅದರ ಮೇಲೆ ಪಿನ್ ನಂಬರ್ ಸಹ ಬರೆದು ಇಟ್ಟಿದ್ದರು. ಕಳೆದ ತಿಂಗಳು ಬ್ಯಾಂಕಿಗೆ ಹೋಗಿ ಹಣ ಡ್ರಾ ಮಾಡಲು ಹೋದಾಗ ಹಣ ಖಾಲಿಯಾಗಿತ್ತು. ದುಷ್ಕರ್ಮಿಗಳು ಅವರ ಕಾರ್ಡ್ನ್ನು ಬದಲಾಯಿಸಿ, ಪಿನ್ ಬಳಸಿಕೊಂಡು ಹಣವನ್ನೆಲ್ಲಾ ಖಾಲಿ ಮಾಡಿದ್ದರು. ಸಿಇಎನ್ ಪೊಲೀಸ್ ಇನ್ಸ್ಪೆಕ್ಟರ್ ವೆಂಕಟರಮಣಪ್ಪ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Related