ಇಂದು ತೆಲಂಗಾಣಕ್ಕೆ ಹಾರಲಿರುವ ಡಿಕೆಶಿ

ಇಂದು ತೆಲಂಗಾಣಕ್ಕೆ ಹಾರಲಿರುವ ಡಿಕೆಶಿ

ಬೆಂಗಳೂರು: ಪಂಚ ರಾಜಕೀಯ ಚುನಾವಣೆ ನವೆಂಬರ್ 30ರಂದು ನಡೆದಿದ್ದು, ಡಿಸೆಂಬರ್ 03ರಂದು ಭಾನುವಾರ ಪಂಚ ರಾಜ್ಯಗಳ ಚುನಾವಣಾ ಭವಿಷ್ಯ ಹೊರಬೀಳಲಿದ್ದು ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ.

ಇನ್ನು ಕರ್ನಾಟಕ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಪ್ರಬಲ್ ಶೂಟರ್ ಎಂದೆ ಖ್ಯಾತಿಯನ್ನು ಹೊಂದಿರುವ ಡಿಕೆ ಶಿವಕುಮಾರ್ ಅವರು ಇಂದು ತೆಲಂಗಾಣ ಪ್ರವಾಸ ಕೈಗೊಂಡಿದ್ದು ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಲು ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರೇ, ಮುಂದೆ ನಿಲ್ಲಬೇಕಾಗಿದೆ ಆದ್ದರಿಂದ ಇಂದು ಡಿಕೆ ಶಿವಕುಮಾರ್ ಅವರು ತೆಲಂಗಾಣಕ್ಕೆ ಹಾರಲಿದ್ದಾರೆ.

ಹೌದು, ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದ್ದು, ಒಂದೊಮ್ಮೆ ಅತಂತ್ರ ಫಲಿತಾಂಶ ಉಂಟಾದರೆ ಕಾಂಗ್ರೆಸ್‌ ಶಾಸಕರನ್ನು ಆಪರೇಷನ್‌ ಮಾಡುವ ಸಾಧ್ಯತೆಯಿದೆ.

ಹೀಗಾಗಿ ಕಾಂಗ್ರೆಸ್‌ ಶಾಸಕರಿಗೆ ರಕ್ಷಣೆ ನೀಡಿ ತೆಲಂಗಾಣದಲ್ಲೂ ಕಾಂಗ್ರೆಸ್‌ ಸರ್ಕಾರ ರಚನೆಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಪಾಲಿನ ಟ್ರಬಲ್ ಶೂಟರ್‌ ಡಿ.ಕೆ. ಶಿವಕುಮಾರ್ ತೆರಳಲಿದ್ದಾರೆ. 119 ವಿಧಾನಸಭೆ ಸದಸ್ಯರನ್ನು ಹೊಂದಿರುವ ತೆಲಂಗಾಣದ ಫಲಿತಾಂಶ ಕಾಂಗ್ರೆಸ್‌ ಪಾಲಿಗೆ ಮಹತ್ವದ್ದಾಗಿದೆ.

Related