‘ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಲಿನ ಪೌಡರ್ ವಿತರಣೆ’

‘ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಲಿನ ಪೌಡರ್ ವಿತರಣೆ’

ಚಿಂಚೋಳಿ : ತಾಲೂಕಿನ ಅದರ್ಶ ವಿದ್ಯಾಲಯದಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸೋಮವಾರ ಗ್ರೇಡ್2 ತಹಶೀಲ್ದಾರ್ ವೆಂಕಟೇಶ್ ದುಗ್ಗನ ಪಠ್ಯಪುಸ್ತಕ ಹಾಗೂ ಹಾಲಿನ ಪೌಡರ್ ವಿತರಿಸಲಾಯಿತು.
ಮುಖ್ಯ ಅಥಿತಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಚಪ್ಪ ಭದ್ರಶೆಟ್ಟಿ, ಮಾತನಾಡಿ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಹಾಲಿನ ಪೌಡರ್ ವಿತರಿಸಲಾಗುತ್ತಿದೆ. ಮಕ್ಕಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಶಾಲೆಗೆ ಹಾಜರಾಗಲು ತಿಳಿಸಿದರು.
ಎಸ್.ಡಿ.ಎಮ್.ಸಿ ಅಧ್ಯಕ್ಷ ಲಕ್ಷ್ಮಣ ಆವುಂಟಿ ಮಾತನಾಡಿ ಎರಡು ವರ್ಷದಿಂದ ಕೊರೋನಾ ಮಾಹಾಮಾರಿಯಿಂದ ಶಾಲೆಗಳು ಸ್ಥಗಿತ ಗೊಂಡಿರುವುದರಿಂದ ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆಯಾಗಿತ್ತು. ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರ ಮುರ್ತುವರ್ಜಿವಹಿಸಿ ಶಾಲೆ ಪ್ರಾರಂಭಿಸಿದ್ದು, ಆತಂಕ ಪಡದೆ ವಿದ್ಯಾರ್ಥಿಗಳು ನಿಯಮ ಪಾಲಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ತರಗತಿಗಳಿಗೆ ಹಾಜರಾಗಲು ಮನವಿ ಮಾಡಿದರು.
ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ಅನೂಕೂಲ ಮಾಡಿಕೊಡಲಾಗಿದ್ದು, ಶಾಲೆ ಪ್ರಾರಂಭವಾಗಿದರಿಂದ 90% ರಷ್ಟು ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ. ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗ ಎಸ್‍ಡಿಎಮ್‍ಸಿ ಸದಸ್ಯರು ವಿದ್ಯಾರ್ಥಿಗಳು ಇನ್ನಿತರರಿದ್ದರು.

Related