ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಡಿ ಎಂ ಚಾರಿಟೇಬಲ್ ಟ್ರಸ್ಟ್ ಏರ್ಪಡಿಸಿದ್ದ ಕೌಶಲ್ಯ ತರಬೇತಿ ಶಿಕ್ಷಣ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಚಾಮರಾಜನಗರ ಜಿಲ್ಲಾ ಪೊಲೀಸ್ ಅಧಿಕಾರಿ ಆಗಿರುವ ಬಿ ಟಿ ಕವಿತಾ ರವರು ಇಂದು (ಶುಕ್ರವಾರ ಜ. 17 ರಂದು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ತರಬೇತಿ ಪಡೆದ ವಿದ್ಯಾರ್ಥಿಗಳ ಕುರಿತು ಕೆಲವು ಹಿತ ನುಡಿಗಳನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದುವುದರಿಂದ ತಮ್ಮ ಮುಂದಿನ ಜೀವನವನ್ನು ಅತಿ ಉಜ್ವಲಕ್ಕೆ ಕೊಂಡೊಯ್ಯಬಹುದು. ಹಾಗಾಗಿ ಪ್ರತಿಯೊಬ್ಬರೂ ಉನ್ನತ ಶಿಕ್ಷಣಕ್ಕಾಗಿ ಕಷ್ಟಪಟ್ಟು ಓದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇದನ್ನೂ ಓದಿ: ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ
ಒಂದು ಅಕ್ಕಿ ಅನ್ನ ಆಗಬೇಕಾದರೆ ಬಿಸಿ ತಾಗಿದಾಗ ಮಾತ್ರ ಅಕ್ಕಿ ಅನ್ನ ಆಗಲು ಸಾಧ್ಯವಾಗುತ್ತದೆ. ಅದೇ ರೀತಿ ನಮ್ಮ ಜೀವನದಲ್ಲೂ ಕೂಡ ಕೆಲವೊಂದು ಸಿಹಿ, ಕಹಿ ಘಟನೆಗಳು ಇದ್ದೇ ಇರುತ್ತವೆ ಅಂತಹ ಘಟನೆಗಳೇ ನಮ್ಮ ಮುಂದಿನ ಜೀವನ ರೂಪಿಸಿಕೊಳ್ಳಲು ಉದಾಹರಣೆಗಳಾಗಿರುವುದೂಂಟು ಎಂದು ಹೇಳಿದರು.
