ರಾಗಿಣಿಯಿಂದ ಗ್ಲೌಸ್ ವಿತರಣೆ

ರಾಗಿಣಿಯಿಂದ ಗ್ಲೌಸ್ ವಿತರಣೆ

ಬೆಂಗಳೂರು, ಮಾ. 15 : ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಜನರ ಸಹಾಯಕ್ಕೆ ಧಾವಿಸಿದ್ದು, ಜನರಿಗೆ ಉಚಿತ ಗ್ಲೌಸ್ಗಳನ್ನು ವಿತರಿಸುತ್ತಿದ್ದಾರೆ. ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ರಾಗಿಣಿ ರಸ್ತೆಗೆ ಇಳಿದಿದ್ದಾರೆ. ಅಲ್ಲದೆ ಕೊರೊನಾಯಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಅಲ್ಲ ಗ್ಲೌಸ್ಗಳನ್ನು ಧರಿಸಿ ಎಂದು ಹೇಳುವ ಮೂಲಕ ಜನರಿಗೆ ಉಚಿತವಾಗಿ ಕೈ ಗ್ಲೌಸ್ಗಳನ್ನು ವಿತರಿಸುತ್ತಿದ್ದಾರೆ. ಯಾವುದಾದರೂ ವಸ್ತುಗಳನ್ನು ಮುಟ್ಟಿದ್ದರೆ ಅದರಿಂದ ಕೊರೊನಾ ಬರುತ್ತೆ. ಹಾಗಾಗಿ ಮಾಸ್ಕ್ ಬದಲು ಕೈ ಗ್ಲೌಸ್ಗಳನ್ನು ಕಡ್ಡಾಯವಾಗಿ ಧರಿಸಿ ಎಂದು ರಾಗಿಣಿ ಜನರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ರಾಗಿಣಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ, ಮಾಸ್ಕ್ ಬದಲು ಗ್ಲೌಸ್ಗಳನ್ನು ಧರಿಸಿ. ಕಾಯಿಲೆ ಬಂದವರು ಮಾಸ್ಕ್ ಗಳನ್ನು ಧರಿಸುತ್ತಾರೆ. ಆದರೆ ನಾವು ನಮ್ಮ ಕೈಗಳಿಂದ ಎಲ್ಲವನ್ನು ಮುಟ್ಟುತ್ತೇವೆ. ಹಾಗಾಗಿ ನಾವು ನಮ್ಮ ಕೈಗಳನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಕೊರೊನಾ ವೈರಸ್ನಿಂದ ದೂರವಿರಲು ಎಲ್ಲರೂ ಮಾಸ್ಕ್ ಬದಲು ಗ್ಲೌಸ್ಗಳನ್ನು ಧರಿಸಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

Related