ರಾಷ್ಟ್ರೀಯ ಲಾಂಛನಕ್ಕೆ ಅವಮಾನ..!

ರಾಷ್ಟ್ರೀಯ ಲಾಂಛನಕ್ಕೆ ಅವಮಾನ..!

“ತಾಳ್ಮೆ ಹಾಗೂ ಘನತೆಯಿಂದ ಕೂಡಿದ ನಾಲ್ಕು ತಲೆಯ ಸಿಂಹವನ್ನು ಶತಮಾನದಿಂದ ನೋಡುತ್ತಿದ್ದೇವೆ. ಆದರೆ ಅಶೋಕ ಚಕ್ರವರ್ತಿಯ ಸಿಂಹಗಳು ಸಹ ಈಗ ಕೋಪಗೊಂಡಿವೆ…” ಎಂಬ ಟೀಕೆಗಳು ವ್ಯಕ್ತವಾಗಿವೆ.

ಹೊಸ ಸಂಸತ್ ಭವನದ ಮೇಲ್ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅನಾವರಣಗೊಳಿಸಿದರು. ಆದರೆ ರಾಷ್ಟ್ರೀಯ ಲಾಂಛನವು ಮೂಲವನ್ನು ಹೋಲುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬಂದಿವೆ.

ಈ ಲಾಂಛನವು ಒಟ್ಟು 9,500 ಕೆಜಿ ತೂಕದ ಕಂಚಿನಿಂದ ಮಾಡಲ್ಪಟ್ಟಿದೆ, 6.5 ಮೀಟರ್ ಎತ್ತರವಿದೆ. ಲಾಂಛನವನ್ನು ಈಗಿನಂತೆ ಕಾಣುವಂತೆ ಮಾಡಲು 100ಕ್ಕೂ ಹೆಚ್ಚು ಕುಶಲಕರ್ಮಿಗಳು ಆರು ತಿಂಗಳ ಕಾಲ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಸಾಮ್ರಾಟ್ ಅಶೋಕನ ಕಾಲದ ನಾಲ್ಕು ತಲೆಯ ಸಿಂಹಕ್ಕೂ, ಹೊಸ ಸಂಸತ್ಭವನದ ಮೇಲೆ ನಿರ್ಮಿಸಲಾಗಿರುವ ಸಿಂಹಕ್ಕೂ ವ್ಯತ್ಯಾಸಗಳು ಕಂಡು ಬರುತ್ತಿವೆ.

ಭಾರತದ ಲಾಂಛನವನ್ನು ಜನವರಿ 26, 1950ರಂದು ಅಂದರೆ ಭಾರತದ ಸಂವಿಧಾನವು ಜಾರಿಗೆ ಬಂದ ದಿನ ಅಂಗೀಕರಿಸಲಾಗಿದೆ. ಬದಲಾದ ಆಕೃತಿಯನ್ನು ಅನೇಕ ಜನರು ಗುರುತಿಸಿದ್ದಾರೆ.


“ಆಕರ್ಷಕತೆಯಿಂದ ವಿರೂಪದ ಕಡೆಗೆ, ಫಿಟ್ನಿಂದ ಕೊಬ್ಬಿನ ಕಡೆಗೆ, ಸೌಂದರ್ಯದಿಂದ ಕುರೂಪದ ಕಡೆಗೆ ರಾಷ್ಟ್ರೀಯ ಲಾಂಛನವೂ ಏಕೆ ಕೆಟ್ಟ ಸ್ವಭಾವವನ್ನು ಹೊಂದಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ರಾಷ್ಟ್ರವು ವಿಫಲವಾಗಿದೆ” ಎಂದು ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಆಶಿಷ್ದುಅ ತಿಳಿಸಿದ್ದಾರೆ.

Related