ದರೋಡೆಕೋರರ ಬಂಧನ

ದರೋಡೆಕೋರರ ಬಂಧನ

ಕೊಟ್ಟೂರು : ಪಟ್ಟಣದ ಉದ್ಯಮಿ ಹುಲ್ಲುಮನಿ ಮಲ್ಲೇಶ ಮನೆಗೆ ಏ. 11 ರಾತ್ರಿ ನುಗ್ಗಿ ಮಾರಾಕಾಸ್ತ್ರಗಳಿಂದ ಎದುರಿಸಿ ಹಿಂದಿನ ಭಾಗದಿಂದ ಬಲಗೈ ಹೊಡೆದು, ಬೆಡ್ ರೂಮ್ ಲಾಕರ್‌ನಲ್ಲಿಟ್ಟಿದ್ದ 30 ಲಕ್ಷ ರೂ. ನಗದನ್ನು ದರೋಡೆ ಮಾಡಿದ್ದ 10 ಜನರ ತಂಡವನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ ಎಂದು ಎಸ್‌ಪಿ ಸೈದುಲ್ಲಾ ಅದಾವತ್ ಹೇಳಿದರು.

ಭಾನುವಾರ ಇಲ್ಲಿನ ಸರ್ಕಲ್ ಇನ್ಸಪೆಕ್ಟರ್ ಕಚೇರಿಯಲ್ಲಿ ಸುದ್ದಿಗೋಷ್ಡಿ ನಡೆಸಿ, ಮಾತನಾಡಿದ ಅವರು. ಹಗರಿಮೊಮ್ಮನಹಳ್ಳಿಯ ಹಿರೆಸೊಬಟಿಯ ಕೋಳಿ ಫಾರಂನಲ್ಲಿ ಅಡಗಿದ್ದ ಇವರನ್ನು ಬಂಧಿಸಿ ಅವರಿಂದ 5,17000 ರೂ. ನಗದು ಐದಾರು ಮಚ್ಚು ಮತ್ತು ಲಾಂಗ್‌ಗಳು ಹಾಗೂ ಒಂದು ಇನೋವಾ ಕಾರ್, ಓಮಿನಿ, ಇಂಡಿಕಾ ವಾಹನಗಳನ್ನು ಮತ್ತು ಮೊಬೈಲ್ ಫೋನ್‌ಗಳನ್ನು ಜಪ್ತು ಮಾಡಿ ವಶಕ್ಕೆ ಪಡೆದಿದ್ದಾರೆ.

ಹಿರೆಸೊಬಟಿಯ ವಿನಾಯಕ ಹಾಗೂ ಗೋಣಿಬಸಪ್ಪ ಇವರನ್ನು ಹೊರತು ಪಡಿಸಿ ಎಸ್. ಸುದರ್ಶನ ಸಂಜಯ ನಗರ, ಜೆ.ಬಿ.ಚೇತನ್, ಎಸ್. ಮಂಜೇಶ ಅವಲಹಳ್ಳಿ, ವಿನೊಬ್ ನಗರ ಮಹಾದೇವ, ತ್ಯಾಗರಾಜ ನಗರ, ಎನ್. ಚಂದ್ರಶೇಖರ್, ಶ್ರೀನಗರ, ಕೃಷ್ಣ, ಸೆಟಲೈಟ್ ಬಸ್ ನಿಲ್ದಾಣ ಹತ್ತಿರ, ಶ್ರೀನಿವಾಸ ನ್ಯೂ ಟಿಂಬರ್ ಯಾರ್ಡ್ ಪಿ. ಕಿರಣ್ ಗಿರಿ ನಗರ ಬೆಂಗಳೂರಿನ ಬಂಧಿತ ಆರೋಪಿಗಳಾಗಿದ್ದಾರೆ.

ಈ ತಂಡದ ಪ್ರಮುಖ ಆರೋಪಿ ಜೀವನ್ ಹಾಗೂ ದರೋಡೆಗೆ ಸಂಬಂಧಿಸಿದಂತೆ ಉಳಿದ 6 ಜನರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ಬೆಂಗಳೂರಿನ ಎಂಟು ಆರೋಪಿಗಳ ಮೇಲೆ ಬೆಂಗಳೂರಿನಲ್ಲಿ ಕೊಲೆ. ದರೋಡೆ. ಕೊಲೆಗೆ ಯತ್ನ ಕೇಸ್ ಗಳಿವೆ ಎಂದು ಮಾಹಿತಿ ನೀಡಿದ ಎಸ್ಪಿ ಸೈದುಲ್ಲಾ ಅದಾವತ್. ದರೋಡೆ ನಡೆದ ದಿನ ಪಟ್ಟಣದ ಸಿ.ಸಿ. ಕ್ಯಾಮಾರ ಅಧಾರದ ಮೇಲೆ ಇವರನ್ನು ಬಂಧಿಸಲಾಗಿದೆ ಎಂದರು.

ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಎರಡು ಕೋಟಿ ರು. ವೆಚ್ಚದಲ್ಲಿ ಸಿಸಿ ಕ್ಯಾಮಾರ ಅಳವಡಿಸಲಾಗುವುದು ಎಂದರು.

ಗೋಷ್ಟಿಯಲ್ಲಿ ಡಿವೈಎಸ್ಪಿ ಹಾಲಮೂರ್ತಿ ರಾವ್. ಸಿಪಿಐ ದೊಡ್ಡಣ್ಣ. ಪಿಎಸ್ಐ ನಾಗಪ್ಪ , ಕೂಡ್ಲಿಗಿ ಪಿ ಎಸ್ ಐ ತಿಮ್ಮಣ್ಣ , ಎ ಎಸ್ ಐ.ಅಬ್ಬಾಸ್, ಎ ಎಸ್ ಐ ವಸಂತ ರಾವ್, ಎ ಎಸ್ ಐ ಗಂಗಾಧರ, ಸೈಪುಲ್ಲಾ ಎ ಎಸ್ ಐ, ಆರ್ ಬಸವರಾಜ, ವಿ ಮಂಜಪ್ಪ, ಹೆಚ್ಚು ಬಸವರಾಜ, ರೇವಣರಾದ್ಯ, ,ರಾಜೇಂದ್ರ ಪ್ರಸಾದ್, ಮಹಂತೇಶ್ ಹಾಗೂ ಪೋಲೀಸ್ ಸಿಬ್ಬಂದಿ ಇದ್ದರು.

Related