`ಕೊವೀಡ್ ಜೊತೆ ಡೆಂಗ್ಯೂ ಭೀತಿ’

`ಕೊವೀಡ್ ಜೊತೆ ಡೆಂಗ್ಯೂ ಭೀತಿ’

ಶಹಾಪುರ : ಕೊರೋನಾ ಸೋಂಕು ಹತೋಟಿಗೆ ಬಂದಂತೆ ಕಾಣುತ್ತಿದ್ದು ಸೋಂಕು ಸದ್ಯದ ಮಟ್ಟಿಗೆ ನಿಯಂತ್ರಣದಲ್ಲಿದೆ . ಆದರೆ ಇದೀಗ ನಗರದ ಬಹುತೇಕ ಆಸ್ಪತ್ರೇಗಳಲ್ಲಿ ಡೆಂಗ್ಯೂ, ಮಲೇರಿಯಾ ಹಾಗೂ ಟೈಫಾಯ್ಡ್ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಕಾಣುತ್ತಿದ್ದು ಒಂದು ವಾರದಲ್ಲಿ ೧೦೦ ಕ್ಕೂ ಹೆಚ್ಚು ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಕೇಲವೊಂದು ಮಕ್ಕಳು ವಾರದಿಂದ ನಗರ ಸೇರಿದಂತೆ ಕಲ್ಬುರ್ಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದರಿಂದ ನಗರ ಜನತೆ ಭಯ ಭೀತರಾಗಿದ್ದಾರೆ. ಕೊರೋನಾ ಮೂರನೇ ಅಲೆಗೂ ಮುನ್ನ ಏಕಾಏಕಿ ಹೆಚ್ಚಳವಾಗುತ್ತಿದ್ದು ಮೈಮರೆತರೆ ಅಪಾಯವಂತು ಕಟ್ಟಿಟ್ಟ ಬುತ್ತಿ. ಕಳೆದೊಂದು ವಾರದಲ್ಲಿ ಹವಾಮಾನ ಬದಲಾದ ಕಾರಣ ಡೆಂಗ್ಯೂ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೂ ನಗರದ ಹಲವೇಡೆ ಸ್ವಚ್ಚತೆಯಿಲ್ಲದರಿಂದ ಜನತೆ ಮಕ್ಕಳನ್ನು ಹೊರ ಬೀಡಲೂ ಸಹ ಹಿಂಜೆರೆಯುತ್ತಿದ್ದಾರೆ.

ರಾತ್ರಿ ಆದರೆ ಸಾಕು ಜೀ.. ಗೀಡುವ ಸೊಳ್ಳೆಗಳಿಂದ ಬೇಸತ್ತಿದ್ದಾರೆ ಎಡಿಸ್ ಈಜಿಪ್ಟಿ ಎಂಬ ಸೊಳ್ಳೆಯಿಂದ ಈ ರೋಗ ಹರಡುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ನಿತ್ರಾಣವಾಗಿಸುತ್ತದೆ. ದೇಹದಲ್ಲಿರುವ ಬಿಳಿ ರಕ್ತಕಣಗಳು ನಾಶವಾಗುತ್ತದೆ. ನಗರದ ಹಲವಡೆ ನಿಂತ ನೀರಿನಿಂದ, ಹುಳು ತುಂಬಿದ ಚರಂಡಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ಆಸ್ಪದ ಕಲ್ಪಸಿದಂತಾಗಿದೆ. ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಆರೋಗ್ಯ ಇಲಾಖೆ ಮತ್ತು ನಗರಸಭೆಯವರು ಕೈಗೊಂಡು ಸರಿಯಾದ ಸಮಯಕ್ಕೆ ಫಾಗಿಂಗ್ ಮತ್ತು ಚರಂಡಿಗಳ ಸ್ವಚ್ಚತೆ ಮಾಡಬೇಕು ಎನ್ನುವುದು ಜನತೆಯ ಒತ್ತಾಯವಾಗಿದೆ.

ಕೊರೋನಾ ಹಾವಳಿಯ ಮಧ್ಯೆ ಡೆಂಗ್ಯೂ ವೈರಸ್ ಸಹ ದೈತ್ಯದಂತೆ ವಕ್ಕರಿಸಿದೆ. ದಿಢೀರನೆ ಡೆಂಗ್ಯೂ ಜ್ವರ ಹೆಚ್ಚಾಗಿದ್ದು ಜನರು ಆತಂಕ ಪಡುವಂತೆ ಮಾಡಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಜನತೆಯನ್ನು ಸಾಂಕ್ರಾಮಿಕ ರೋಗಗಳಿಂದ ಪಾರು ಮಾಡಲು ಸ್ವಚ್ಚತೆಗೆ ಮುಂದಾಗಬೇಕಿದೆ.

Related