ಮನೆ ಯಜಮಾನಿಗೆ ಗೃಹ ಲಕ್ಷ್ಮೀ ಹಣ ಜಮೆ ವಿಳಂಬ

ಮನೆ ಯಜಮಾನಿಗೆ ಗೃಹ ಲಕ್ಷ್ಮೀ ಹಣ ಜಮೆ ವಿಳಂಬ

ಬೆಂಗಳೂರು, ಸೆ.9: ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮೀ ಯೋಜನೆಯಡಿ  ಮನೆ ಯಜಮಾನಿಯ ಖಾತೆಗಳಿಗೆ ಹಣ ಜಮೆಯಾಗಿದ್ದರೂ ಇನ್ನುಕೆಲ ಪಾಲಾನುಭವಿಗಳಿಗೆ ಹಣ ಅವರ ಬ್ಯಾಂಕ್‌ ಖಾತೆಗಳಿಗೆ ತಲುಪಿಲ್ಲ .  ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ನೋಂದಣಿ ಮಾಡದ ಕಾರಣ ವಿಳಂಭಾಗಿದೆ. ಇದರ ಜೊತೆಗೆ ಅರ್ಜಿ ಸಲ್ಲಿಸಿರುವ ಮನೆಯೋಡತಿಯರ ಮಾಹಿತಿ ಅಪೂರ್ಣವಾಗಿರುವ ಕಾರಣ ಸಾವಿರಾರು  ಯೋಜನೆಯ ಪಾಲಾನುಭವಿಗಳಾಗಲು ಅಡ್ಡಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಗೃಹಲಕ್ಷ್ಮಿ ಯೋಜನೆಗೆ ಸರಕಾರ 4500 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದ್ದು,    ಪ್ರತಿ ತಿಂಗಳು 2100 ಕೋಟಿ ಹಣ ಡಿಬಿಟಿ ಮೂಲಕ ಜಮೆಯಾಗಲಿದೆ ಆಯಾ ತಿಂಗಳ 15ರೊಳಗೆ  ಹಣ ಫಲಾನುಭವಿಗೆ ಜಮೆಯಾಗಲಿದೆ.

ಇದುವರೆಗೆ 1.13 ಕೋಟಿ ಗೃಹಲಕ್ಷ್ಮಿ ಪಾಲಾನುಭವಿಗಳ ನೋಂದಣಿಯಾಗಿದ್ದು ಇದರಲ್ಲಿ 44.52 ಲಕ್ಷ ಪಾಲಾನುಭವಿಗಳಿಗೆ ಎರಡು ಸಾವಿರ ಹಣ ಜಮೆಯಾಗಿದೆ. ಇನ್ನೂ 69.05 ಲಕ್ಷ ಪಾಲಾನಿಭವಿಗಳ ಖಾತೆಗೆ ಹಣ  ತಲುಪಿಲ್ಲ . ಮುಂದಿನ  ಹತ್ತು ದಿನದಲ್ಲಿ ಎಲ್ಲ ಪಾಲಾನುಭವಿಗೆ ಜಮೆ ಆಗಲಿದೆ.ಕಳೆದೊಂದು ವಾರದಲ್ಲಿ ಶೇ.45ರಷ್ಟು ಪಾಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ. ಆಧಾರ್, ಬ್ಯಾಂಕ್ ಕೆವೈಸಿ, ಲಿಂಕ್ ಮಾಡದೇ ಇರೊದ್ರಿಂದ ಡಿಬಿಡಿ ವರ್ಗಾವಣೆ ವಿಳಂಭವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೀಗಾಗಿ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 1902 ಹೆಲ್ಪ್‍ಲೈನ್ , ಅಂಗನವಾಡಿ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

Related