ಬೆಂಗಳೂರು: ನಟಿ ದೀಪಿಕಾ ದಾಸ್ ಅವರು ನಾಗಿಣಿ ಧಾರಾವಾಹಿ ಮೂಲಕ ಕನ್ನಡದ ಮನೆಮಗಳಾಗಿದ್ದರು. ಇದಾದ ಬಳಿಕ ಕನ್ನಡ ಬಿಗ್ ಬಾಸ್ ಸೀಸನ್ 7 ರಲ್ಲಿ ಪರ್ಧಿಯಾಗಿ ಇನ್ನಷ್ಟು ಜನ ಮಂಡನೆಯನ್ನು ಗಳಿಸಿದರು.
ಬಳಿಕ ಇತ್ತೀಚೆಗೆ ದೀಪಕ್ ಅನ್ನುವ ಉದ್ಯಮಿಯನ್ನು ಮದುವೆಯಾಗಿ ಈಗ ವೆಕೇಷನ್ ಮೂಡಲ್ಲಿ ಪತಿ ಜೊತೆ ಓಡಾಡುತ್ತಿದ್ದಾರೆ.
ಪತಿ ದೀಪಕ್ ಜೊತೆ ವಿಕೇಶ್ ನಲ್ಲಿರುವ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಪತಿ ಜೊತೆ ದೀಪಿಕಾ ಟರ್ಕಿಗೆ ತೆರಳಿದ್ದು, ರೆಕ್ಕೆಯನ್ನು ಬೆನ್ನಿಗೆ ಸಿಕ್ಕಿಸಿ, ಕಲರ್‌ಫುಲ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಯಾವಾಗಲೂ ಸೂರ್ಯನ ಕಿರಣಕ್ಕೆ ಮುಖ ಒಡ್ಡಿಕೊಳ್ಳಿ, ಆಗ ನೆರಳು ನಿಮ್ಮ ಹಿಂದೆಯೇ ಉಳಿಯುತ್ತದೆ ಎಂದು ಕ್ಯಾಪ್ಷನ್ ನೀಡಿದ್ದಾರೆ.
ದೀಪಿಕಾ ದಾಸ್‌ಗೆ ಗೋವಾದಲ್ಲಿ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಬಳಿಕ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ದೀಪಿಕಾ ಉದ್ಯಮಿ ದೀಪಕ್ ಎಂಬವವರ ಜೊತೆ ಹಸೆಮಣೆ ಏರಿದ್ದಾರೆ.