ದೀಪಿಕಾ ಬಿಕಿನಿಗೆ ರಣವೀರ್ ಫನ್ನಿ ಕಮೆಂಟ್

ದೀಪಿಕಾ ಬಿಕಿನಿಗೆ ರಣವೀರ್ ಫನ್ನಿ ಕಮೆಂಟ್

ಮುಂಬೈ, ಮಾ. 11 : ದೀಪಿಕಾ ಪಡುಕೋಣೆ ಸಮುದ್ರದಡದಲ್ಲಿ ಬಿಕಿನಿ ತೊಟ್ಟು ಮಾದಕವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋಗೆ ರಣ್ವೀರ್ ಸಿಂಗ್ ಫನ್ನಿಯಾಗಿ ಕಮೆಂಟ್ ಮಾಡಿದ್ದಾರೆ. ಬಾಲಿವುಡ್ ಬಾಜೀರಾವ್-ಮಸ್ತಾನಿ ಜೋಡಿ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್. ಪಡ್ಡೆಹುಡುಗರ ಮನಸ್ಸಿಗೆ ಕಿಚ್ಚು ಹಚ್ಚುವ ಫೋಟೋಗಳನ್ನು ದೀಪಿಕಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮದುವೆಗೂ ಮುನ್ನ ಇದೇ ರೀತಿ ಒಬ್ಬರನ್ನೊಬ್ಬರ ಫೋಟೋಗಳಿಗೆ ಕಮೆಂಟ್ ಮಾಡುವ ಮೂಲಕ ಕಾಲೆಳೆಯುತ್ತಿದ್ದರು. ಸದ್ಯ ಜೋಡಿ ’83’ ಸಿನಿಮಾದಲ್ಲಿ ನಾಲ್ಕನೇ ಬಾರಿಗೆ ಜೊತೆಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಸಿನಿಮಾ ಪ್ರಚಾರಕ್ಕಾಗಿ ಚೆನ್ನೈಗೆ ತೆರಳಿದ್ದರು. ಚೆನ್ನೈನಿಂದ ಹಿಂದಿರುಗುತ್ತಿರುವ ಬಗ್ಗೆ ರಣ್ವೀರ್ ಸಿನಿಮಾ ತಂಡದ ಜೊತೆಯಲ್ಲಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು.

Related