ಚಿಕ್ಕೋಡಿ ತಾಲೂಕಿನಲ್ಲಿ ರಾಷ್ಟ್ರ ಪಕ್ಷಿಗಳ ಮಾರಣಹೋಮ

ಚಿಕ್ಕೋಡಿ ತಾಲೂಕಿನಲ್ಲಿ ರಾಷ್ಟ್ರ ಪಕ್ಷಿಗಳ ಮಾರಣಹೋಮ

ಬೆಳಗಾವಿ: ರಾಷ್ಟ್ರ ಪಕ್ಷಿ ನವಿಲಿಗೆ ವಿಷ ಹಾಕಿ ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹೌದು, ಕಬ್ಬಿನ ಗದ್ದೆಯೊಂದರಲ್ಲಿ ಸುಮಾರು ಎಂಟು ನವಿಲುಗಳ ಮೃತ ದೇಹ ಪತ್ತೆಯಾಗಿದ್ದು ವಿಷ ಹಾಕಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ.

ನಮಗೆ ಗೊತ್ತಿರುವ ಹಾಗೆ ಕಾಡು ಪ್ರಾಣಿಗಳನ್ನು ಕೊಲ್ಲುವುದು ಮತ್ತು ತಿನ್ನುವುದು ಕಾನೂನು ಬಾಹಿರವೆಂದು ಗೊತ್ತಿದ್ದರೂ ಕೂಡ ದುಷ್ಕರ್ಮಿಗಳು 8 ನವಿಲುಗಳನ್ನು ಸಾಯಿಸಿರುವ ಘಟನೆ ನಡೆದಿರುವುದು ಮನ ಕದಕುವಂತಿದೆ.

ಮಾಂಜರಿ ಗ್ರಾಮಸ್ಥರು ಕಳ್ಳರನ್ನು ಬೆನ್ನಟ್ಟಿದಾಗ ಕೃಷ್ಣಾ ನದಿಗೆ ಹಾರಿ ಪರಾರಿ ಆಗಿದ್ದರು. ಕೃಷ್ಣಾ ನದಿ ದಡದ ಆಚೆಗೆ ಬೈಕ್ ನಿಲ್ಲಿಸಿ ನವಿಲುಗಳನ್ನು ಕೊಲ್ಲಲು ಮಾಂಜರಿ ಗ್ರಾಮಕ್ಕೆ ಬರುತ್ತಿದ್ದರು. ಹೀಗೆ ನವಿಲು ಕೊಲ್ಲುವ ಕಳ್ಳರು ಬಂದಾಗ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಂಜರಿ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೃತ ನವಿಲುಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರು RFO ಪ್ರಶಾಂತ ಗೌರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಗ್ರಾಮದ ಹೊಲಗಳಲ್ಲಿ ಈ ಹಿಂದೆಯೂ ನವಿಲುಗಳ ಮಾರಣಹೋಮದ ನಡೆದಿತ್ತು. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ಅರಣ್ಯಾಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಬೇಜವಾಬ್ದಾರಿ ವಹಿಸಿದ್ದಾರೆ. ಆದ್ದರಿಂದಲೇ ಪುನಃ 11 ನವಿಲುಗಳ ಮಾರಣ ಹೋಮ ನಡೆದಿದೆ ಎಂದು ಕಿಡಿಕಾರಿದ್ದಾರೆ.

 

Related