ಡಿಡಿಪಿಐ ಕಡ್ಡಾಯ ರಜೆಯ ಮೇಲೆ ಕಳಿಸಲು ತಿರ್ಮಾನ

ಡಿಡಿಪಿಐ ಕಡ್ಡಾಯ ರಜೆಯ ಮೇಲೆ ಕಳಿಸಲು ತಿರ್ಮಾನ

ಯಾದಗಿರಿ : ಚುನಾಯಿತ ಪ್ರತಿನಿಧಿಗಳಿಗೆ ಸೂಕ್ತ ಮಾಹಿತಿ ನೀಡದೆ ಇರುವುದು ಹಾಗೂ ಇಲಾಖೆನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವಲ್ಲಿ ವಿಫಲಾರಾಗಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಡಿಡಿಪಿಐ ಶ್ರೀನಿವಾಸರೆಡ್ಡಿ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಲು ನಿರ್ಧರಿಸಲಾಯಿತು.

ಸೋಮವಾರದಂದು ಜಿ.ಪಂ ಸಭಾಂಗಣದಲ್ಲಿ ಜರುಗಿಸ ಜಿ.ಪಂ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಆರೋಪ ಮಾಡಿದ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಾಸ್ತವ ಪರಸ್ಥಿತಿ ಕಟ್ಟಡಗಳ ಮಾಹಿತಿ ಬೋಧನೆಗೆ ನೇಮಿಸಕೊಳ್ಳಲಾದ ಶಿಕ್ಷಕರ ಮಾಹಿತಿ ಸೇರಿದಂತೆ ಅನೇಕ ಮಾಹಿತಿ ಇಲಾಖೆ ಕಾರ್ಯದರ್ಶಿ ಕೇಳಿದ್ದು ಆದರೆ ಅದಕ್ಕೆ ಯಾವುದೆ ಸಮರ್ಪಕ ಉತ್ತರ ನೀಡದೆ ನಿರ್ಲಕ್ಷ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಳೆದ ಒಂದು ವರ್ಷದಿಂದ ಕಾರ್ಯಾಲಯದಲ್ಲಿ ಅನೇಕ ಕಡತಗಳು ವಿಲೇವಾರಿಯಾಗಿಲ್ಲ. ಇಲಾಖೆಯಲ್ಲಿ 4 ಜನ ವಿಷಯ ಪರಿವೀಕ್ಷಕರು ಇಲ್ಲದರ ಬಗ್ಗೆಯಾಗಲಿ ವಸತಿ ಶಾಲೆಗಳಿಗೆ ಮಂಜೂರಿಯಾದ 70 ಲಕ್ಷ ಅನುದಾನ ಬಳಕೆ ಮಾಡಿಕೊಳ್ಳದೆ ಇರುವುದು ಹಾಗೂ ಸರ್ಕಾರದ ಯೋಜನೆಗಳು ಸಮರ್ಪಕ ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾದ ಬಗ್ಗೆ ಸದಸ್ಯರು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಇವರನ್ನು ಕಡ್ಡಯವಾಗಿ ರಜೆಯ ಮೇಲೆ ಕಳುಹಿಸುವುದರ ಜೊತೆಗೆ ಇಲಾಖಾ ತನಿಖೆ ನಡೆಸುವಂತೆ ಸದಸ್ಯರು ಅಧ್ಯಕ್ಷರನ್ನು ಆಗ್ರಹಿಸಿದರು.

ಜಿಲ್ಲೆಯ ಪ್ರೌಢ ಶಾಲೆಗಳಲ್ಲಿ 38 ವಿಜ್ಞಾನ ಮತ್ತು 42 ಇಂಗ್ಲೀಷ್ ಶಿಕ್ಷಕರ ಕೊರತೆಯಿದ್ದರೂ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿಲ್ಲ. ವಸತಿ ಶಾಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಇಲಾಖೆಯನ್ನು ನಡೆಸಿಕೊಂಡು ಹೋಗಲು ಆಗುವುದಿಲ್ಲ. ಅದಕ್ಕಾಗಿ ಇವರನ್ನು ಕಡ್ಡಾಯವಾಗಿ ರಜೆಯ ಮೇಲೆ ಕಳೆಸಿ ಸೇರಯ ಅಧಿಕಾರಿಯನ್ನು ನೇಮಿಸುವಂತೆ ಸದಸ್ಯರು ಆಗ್ರಹದ ಹಿನ್ನಲೆಯಲ್ಲಿ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಅಧ್ಯಕ್ಷ ಬಸನಗೌಡ ಯಾಡಿಯಪೂರ ಹೇಳಿದರು.

ಸೂಕ್ತ ಕ್ರಮಕ್ಕಾಗಿ ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಸಭೆಗೆ ತಿಳಿಸಿದರು.

Related