ಮಗಳ ಮುಡಿ ಕೊಟ್ಟು ಹರಕೆ ತೀರಿಸಿದ ರಾಕಿ

ಮಗಳ ಮುಡಿ ಕೊಟ್ಟು ಹರಕೆ ತೀರಿಸಿದ ರಾಕಿ

ಬೆಂಗಳೂರು, ಮಾ.11 : ಯಶ್ ತಮ್ಮ ಮಗಳ ಮುಡಿ ಕೊಡಿಸುವ ಹರಕೆ ಹೊತ್ತಿದ್ದರು. ಆ ಹರಕೆ ತೀರಿಸಲೆಂದು ಯಶ್ ಮತ್ತು ರಾಧಿಕಾ ಪಂಡಿತ್ ಇಂದು ಮಗಳು ಆಯ್ರಾ ಜೊತೆ ಆಗಮಿಸಿದ್ದರು. ಮಗಳ ಮುಡಿ ಒಪ್ಪಿಸುವ ಮೂಲಕ ಹರಕೆ ತೀರಿಸಿದರು.ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿ ಕುಳಿತು ಯಶ್- ರಾಧಿಕಾ ಪಂಡಿತ್ ನಂಜುಂಡೇಶ್ವರನಿಗೆ ನಮಿಸಿದರು. ಮುಂಜಾನೆಯೇ ದೇವಾಲಯದಲ್ಲಿ ಯಶ್ ಮತ್ತು ರಾಧಿಕಾ ನೋಡಿ ಅಭಿಮಾನಿಗಳು ಸಂತಸಪಟ್ಟರು. ಅಷ್ಟೇ ಅಲ್ಲ ರಾಕಿ ಭಾಯ್ಗೆ ಜೈಕಾರ ಕೂಡ ಹಾಕಿದರು.
ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ. ಯಶ್ ತಮ್ಮ ಕುಟುಂಬದವರಿಗೂ ಹೆಚ್ಚಿನ ಸಮಯ ಕೊಡುತ್ತಿದ್ದಾರೆ. ಎರಡನೇ ಮಗು ಜನಿಸಿದಾಗ ಯಶ್ ಶೂಟಿಂಗ್ನಿಂದ ಬ್ರೇಕ್ ಪಡೆದುಕೊಂಡು ಸಂಪೂರ್ಣವಾಗಿ ಕುಟುಂಬದ ಜೊತೆ ಸಮಯ ಕಳೆದಿದ್ದರು. ಈಗ ಸಿನಿಮಾ ಕೆಲಸಗಳ ಮಧ್ಯೆಯೂ ಯಶ್ ಕುಟುಂಬ ಸಮೇತ ಮೈಸೂರಿನ ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಯಶ್ ದೇವರ ಮೇಲೆ ಸಾಕಷ್ಟು ಭಕ್ತಿ ಹೊಂದಿದ್ದಾರೆ. ಹೀಗಾಗಿ, ಅವರು ಆಗಾಗ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ.

Related