ಅಪಾಯಕಾರಿ ವೈರಸ್ ಪತ್ತೆ!

ಅಪಾಯಕಾರಿ ವೈರಸ್ ಪತ್ತೆ!

ಬ್ರಿಟನ್; ಇತ್ತೀಚಿಗೆ ಪ್ರಪಂಚದಾದ್ಯಂತ ಕೊರೋನಾ ಎಂಬ ಸೋಂಕಿನಿಂದ ಇಡೀ ಪ್ರಪಂಚದ ಜನವೇ ತತ್ತರಿಸಿತು ಆದರೆ ಈಗ ಮತ್ತೆ ಇಡೀ ಪ್ರಪಂಚದಾದ್ಯಂತ ಹೊಸ ರೋಗಗಳು ಪತ್ತೆ ಆಗುತ್ತಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಹೌದು ಇತ್ತೀಚಿಗೆ ಕಂಡು ಬರುತ್ತಿರುವಂತಹ ಹಂದಿ ಜ್ವರ ಎಚ್1ಎನ್1 ಕಾಯಿಲೆಯು ಜನರಲ್ಲಿ ಭಯ ಭೀತಿಯನ್ನು ಹುಟ್ಟಿಸುತ್ತಿದೆ. ಚೀನಾದಲ್ಲಿ ನ್ಯುಮೋನಿಯಾ ವಿನಾಶವನ್ನು ಸೃಷ್ಟಿಸಿದೆ. ಇದೀಗ ಹಂದಿಜ್ವರದ H1N2 ಬ್ರಿಟನ್ನಿನ ಆತಂಕವನ್ನು ಹೆಚ್ಚಿಸಿದೆ. ಹಂದಿಗಳಲ್ಲಿ ಕಂಡುಬರುವ ಈ ತಳಿಯು ಮಾನವರಲ್ಲಿ ಕಂಡುಬರುವ ಮೊದಲ ಪ್ರಕರಣವಾಗಿದೆ. ಯುಕೆ ಹೆಲ್ತ್ ಪ್ರೊಟೆಕ್ಷನ್ ಏಜೆನ್ಸಿ ಇದನ್ನು ದೃಢಪಡಿಸಿದೆ. ಉತ್ತರ ಯಾರ್ಕ್‌ಷೈರ್‌ನಲ್ಲಿ ಯುವಕನಿಗೆ ಉಸಿರಾಟದ ತೊಂದರೆಗಾಗಿ ಪರೀಕ್ಷಿಸಲಾಯಿತು. ಈ ವೇಳೆ ಆತನಲ್ಲಿ ಹಂದಿ ಜ್ವರ ಸ್ಟ್ರೈನ್ ಎಚ್1ಎನ್2 ಪತ್ತೆಯಾಗಿತ್ತು.

ಈ ವೈರಸ್ ಹಂದಿಗಳಲ್ಲಿ ಕಂಡುಬರುತ್ತದೆ ಎಂಬುವುದು ಉಲ್ಲೇಖನೀಯ. ಆದರೆ ಬ್ರಿಟನ್‌ನಲ್ಲಿ ಮಾನವರಲ್ಲಿ ಈ ರೀತಿಯ ಜ್ವರ ಕಾಣಿಸಿಕೊಂಡ ಮೊದಲ ಪ್ರಕರಣ ಇದಾಗಿದೆ. ವ್ಯಕ್ತಿಗೆ ಹಂದಿ ಜ್ವರದ ಸೌಮ್ಯ ಲಕ್ಷಣಗಳು ಕಂಡುಬಂದಿದ್ದು, ಅವರು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಆದಾಗ್ಯೂ, ಈ ಹಂದಿ ಜ್ವರ ಎಷ್ಟು ಅಪಾಯಕಾರಿ ಎಂದು ಇನ್ನೂ ತಿಳಿದಿಲ್ಲ. ಹಂದಿಜ್ವರದ ಈ ಸ್ಟ್ರೈನ್ ಪತ್ತೆಯಾದ ವ್ಯಕ್ತಿಯು ಕೆಲಸ ಮಾಡಿರುವುದು ಅಥವಾ ಹಂದಿಗಳೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿದ್ದು ಕಂಡುಬಂದಿಲ್ಲ.

 

Related