ಬೇಸಿಗೆ ಬಿಸಿಲಿಗೆ ಬೇಕು ಸೌತೆಕಾಯಿ

ಬೇಸಿಗೆ ಬಿಸಿಲಿಗೆ ಬೇಕು ಸೌತೆಕಾಯಿ

ಬೇಸಿಗೆ ಬಂತೆಂದರೆ ಸಾಕು, ನಮ್ಮ ಆಹಾರ ಕ್ರಮದಲ್ಲಿ ನಾವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ನಮಗೆ ಬಾಯಾರಿಕೆ ಆಗೋದು ಸರ್ವೇಸಾಮಾನ್ಯ.

ಬೇಸಿಗೆಯಲ್ಲಿ ನಾವು ಹೆಚ್ಚಾಗಿ ಅಂಗಡಿಗಳಲ್ಲಿ ಸಿಗುವಂತ ತಂಪು ಪಾನೀಯಗಳನ್ನು ಅವಲಂಬಿಸುತ್ತೇವೆ. ಆದರೆ ಇದರಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮನೆಯಲ್ಲಿ ಸಿಗುವಂತಹ ಸೌತೆಕಾಯಿಯನ್ನು ಬಳಸಿಕೊಂಡು ನಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಬಹುದು.

ಹೌದು ಪ್ರತಿನಿತ್ಯ ನಮ್ಮ ಆಹಾರದಲ್ಲಿ ಸೌತೆಕಾಯಿಯನ್ನು ಸೇವಿಸುವುದರಿಂದ ನಮ್ಮ ಜೀರ್ಣ ಶಕ್ತಿ ಹೆಚ್ಚಾಗುವುದರ ಜೊತೆಗೆ ನಮ್ಮ ದೇಹದಲ್ಲಿರುವ ಉಷ್ಣಾಂಶವನ್ನು ತೆಗೆದುಹಾಕುತ್ತದೆ.

ಸೌತೆಕಾಯಿ ಜ್ಯೂಸ್ ಮಾಡಿ ಕುಡಿಯುವುದರಿಂದ ಕೂಡ ನಮ್ಮ ದೇಹದಲ್ಲಿರುವ ಉಷ್ಣಾಂಶ ಮತ್ತು ದೌರ್ಬಲ್ಯವನ್ನು ತೆಗೆದುಹಾಕುತ್ತದೆ.

ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಸೌತೆಕಾಯಿ ಜ್ಯೂಸ್ ಕುಡಿಯಬೇಕು ಇದರಿಂದ ನಮ್ಮ ದೇಹ ತಂಪಾಗಿರುತ್ತದೆ.

ಸೌತೆಕಾಯಿ ಜೊತೆ ಲಿಂಬೆಹಣ್ಣು, ಪುದಿನ ಸೊಪ್ಪು ಮತ್ತು ಸ್ವಲ್ಪ ಉಪ್ಪು ಸ್ವಲ್ಪ ಸಕ್ಕರೆಯನ್ನು ಬೆರೆಸಿ ಜ್ಯೂಸ್ ಮಾಡಿ ಸೇವನೆ ಮಾಡುವುದರಿಂದ ಬಿಸಿಲಿಗೆ ಬಳಲುವ ನಮ್ಮ ದೇಹಕ್ಕೆ ತಂಪಾಗುತ್ತದೆ ಇದರ ಜೊತೆಗೆ ನಮ್ಮ ಚರ್ಮದ ರಕ್ಷಣೆ ಕೂಡ ಒದಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಇದು ಮಾತ್ರವಲ್ಲದೇ ದೇಹದಲ್ಲಿ ನೀರಿನಂಶ ಕಾಪಾಡಿ, ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರ ಹಾಕುವಲ್ಲಿ ಸಹಾಯ ಮಾಡುತ್ತೆ.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಸೆಕೆಗೆ ತ್ವಚೆಯಲ್ಲಿ ತುರಿಕೆ ಬರುವುದನ್ನು ತಡೆಯುತ್ತದೆ.

ಬಿಸಿಲಿನಲ್ಲಿ ಸುತ್ತಾಡಿ ಬಂದ ಮೇಲೆ ಇದರಿಂದ ತವಚೆ ಮೇಲೆ ಮೆಲ್ಲಗೆ ಮಸಾಜ್‌ ಮಾಡಿದರೆ ಟ್ಯಾನ್‌ ಆಗುವುದನ್ನು ತಪ್ಪಿಸಬಹುದು.

 

Related