ಬೊಮ್ಮನಹಳ್ಳಿ: “ಧರ್ಮೋ ರಕ್ಷತಿ ರಕ್ಷಿತಃ”, ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ನಡೆಸುತ್ತಿದ್ದು, ಯಾವುದೇ ಧರ್ಮವನ್ನು ಅವಹೇಳನ ಮಾಡಬಾರದು. ಹಿಂದೂ, ಮುಂಸ್ಲಿಂ, ಕ್ರಿಶ್ಚಿಯನ್ ಎಂಬ ಬೇದ ತೊರೆದು. ಇಂದು ಧರ್ಮಸ್ಥಳ ರಕ್ಷಣೆಗೆ ಮುಂದಾಗಿದ್ದೇವೆಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಸತೀಶ್ ರೆಡ್ಡಿ ನುಡಿದರು.
ಇಂದು (ಆ. 23. ಶನಿವಾರ) ಹೊಂಗಸಂದ್ರದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಶಾಸಕ ಎಂ. ಸತೀಶ್ ರೆಡ್ಡಿಯವರು ಸುಮಾರು 300 ವಾಹನಗಳೊಂದಿಗೆ ಸಾವಿರಾರು ಭಕ್ತಾದಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಡನೆ ಧರ್ಮಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಪ್ರಚಾರ ಮಾಡುತ್ತಿರುವ ಕೆಲವರು ಈಗಾಗಲೇ ಶ್ರೀ ಮಂಜುನಾಥನ ಅವಕೃಪೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಕಳೆದ ಎರಡು ದಿನಗಳಿಂದ ಪೊಲೀಸರು ಅಂತಹವರನ್ನು ಬಂಧಿಸುತ್ತಿದ್ದಾರೆ. ಸದನದಲ್ಲಿ ಈಗಾಗಲೇ ಧರ್ಮಸ್ಥಳದ ಅಪಪ್ರಚಾರದ ಬಗ್ಗೆ ಧ್ವನಿ ಎತ್ತಿದ್ದೇವೆ.
ತಿರುಪತಿ, ಶಬರಿ ಮಲೈ ಮೇಲೆ ನಿರಂತರವಾಗಿ ಧರ್ಮಯುದ್ಧ ನಡೆಯುತ್ತಿದ್ದು, ಇದೀಗ ಧರ್ಮಸ್ಥಳಕ್ಕೂ ತಟ್ಟಿದೆ. ಧರ್ಮವನ್ನು ರಕ್ಷಿಸುವ ಅಗತ್ಯತೆ ಇದೆ. ಧರ್ಮಸ್ಥಳದ ಬಗ್ಗೆ ಈಗಾಗಲೇ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ನೀಡುತ್ತಿದೆ. ಧರ್ಮಸ್ಥಳದ ಅಪಪ್ರಚಾರದ ಬಗ್ಗೆ ವಿದೇಶಿಗಳಲ್ಲಿ ನೆಲೆಸಿರುವ ಹಿಂದೂ ಧರ್ಮಿಯರು ಆತಂಕಕ್ಕೆ ಒಳಗಾಗಿದ್ದಾರೆ. 
ಸೌಜನ್ಯ ಪ್ರಕರಣವನ್ನಿಟ್ಟುಕೊಂಡು ಧರ್ಮಸ್ಥಳಕ್ಕೆ ಕಳಂಕ ತರಬಾರದು. ಎಸ್‌ಐಟಿ ತನಿಖೆ ಮಾಡಲಿ ಅದಕ್ಕೇನು ಸಮಸ್ಯೆಯಿಲ್ಲ. ಅದರೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಸಹಿಸೋದಿಲ್ಲ. ನಮ್ಮ ಧರ್ಮದ ಮೇಲೆ ಎಷ್ಟೋ ಅಪಪ್ರಚಾರಗಳು ಮೊದಲಿನಿಂದಲೂ ಆಗಿದೆ. ಅದ್ರೆ ನಮ್ಮ ಧರ್ಮ ಅದಕ್ಕೆಲ್ಲ ಜಗ್ಗಿಲ್ಲ. ಈಗಾಗಲೇ ಅಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಗೊತ್ತು. ಇದರ ಹಿಂದೆ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಗೊತ್ತಾಗಬೇಕು. ಇದನ್ನೂ ಓದಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಭವ್ಯ “ಧರ್ಮಯಾತ್ರೆ”
ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮದರ್ಶಿ ಡಾ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕಾಂಗ್ರೆಸ್ ಸರ್ಕಾರ ಷಡ್ಯಂತ್ರವನ್ನು ನಡೆಸಿ ಭಕ್ತರಲ್ಲಿ ಹಾಗೂ ಸನಾತನ ಧರ್ಮವನ್ನು ನಾಶಗೊಳಿಸುವ ಹುನ್ನಾರ ನಡೆಸಿರುವ ವಿರುದ್ಧ ಇಂದು ಧರ್ಮಯಾತ್ರೆಯನ್ನು ಕೈಗೊಂಡಿದ್ದೇವೆ. ಈ ಧರ್ಮಯಾತ್ರೆಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಧರ್ಮದವರು ಪಾಲ್ಗೊಂಡಿದ್ದಾರೆ. ನಾವುಗಳೆಲ್ಲಾ ಡಾ. ವೀರೇಂದ್ರ ಹೆಗ್ಗಡೆಯವರ ಪರ ನಿಲ್ಲುತ್ತೇವೆ ಎಂಬ ಸಂದೇಶ ರವಾನಿಸಿದರು.
ಈ ಧರ್ಮಯಾತ್ರೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಜಲ್ಲಿ ರಮೇಶ್, ರಾಮ ಮೋಹನ್ ರಾಜ್, ಬಿ. ಮಂಜುನಾಥ ರೆಡ್ಡಿ, ಪುರುಷೋತ್ತಮ್ (ರವಿ), ಅರಕೆರೆ ವಾರ್ಡ್ ಅಧ್ಯಕ್ಷ ಮಂಜುನಾಥ್, ಬಿಜೆಪಿ ಮುಖಂಡರುಗಳಾದ ಮುನಿರಾಂ, ಮುರಳಿ, ರಾಮಚಂದ್ರ, ಸೋಮಸಂದ್ರಪಾಳ್ಯ ಶ್ರೀನಿವಾಸ ರೆಡ್ಡಿ, ಇಬ್ಬಲೂರು ಮುನಿರಾಜು, ಎಟಿ ಲೋಕೇಶ್ ಮತ್ತಿತರರು ಇದ್ದರು.
