ಕರಾವಳಿ ಬೆಡಗಿಗೆ ಕೋಟಿ ಕೋಟಿ ಬಂಪರ್ ಆಫರ್

ಕರಾವಳಿ ಬೆಡಗಿಗೆ ಕೋಟಿ ಕೋಟಿ ಬಂಪರ್ ಆಫರ್

ಬೆಂಗಳೂರು, ಮಾ. 19: ಕೆಲವು ನಟ ನಟಿಯರು ಕನ್ನಡ ಚಿತ್ರರಂಗಕಿಂತ ಪರಭಾಷೆಗಳಲ್ಲಿ ತಮ್ಮ ಅಭಿನಯದ ಮೂಲಕ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಅಂತರದಲ್ಲಿ ಕರಾವಳಿಯ ಬೆಡಗಿ ಎಂದೆನಿಸಿಕೊಂಡಿರುವ ಪೂಜಾ ಹೆಗಡೆ ಅವರು ಕೂಡ ಒಬ್ಬರು.

ಹೌದು, ಕರಾವಳಿ ಬೆಡಗಿ ಪೂಜಾ ಹೆಗ್ಡೆ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು, ಬಾಲಿವುಡ್ನ  ಮೊಹೆಂಜೊದಾರೊ ಸಿನಿಮಾದ ಮೂಲಕವೆ. ಆದರೆ ಅವಕಾಶಗಳು ಹೆಚ್ಚಾಗಿ ಅರಸಿ ಬಂದಿದ್ದು ಮಾತ್ರ ಟಾಲಿವುಡ್ನಿಂದ. ಹೀಗಾಗಿ ಪೂಜಾಗೆ ಟಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಾಗಿಯೇ ಇದೆ. ಆದರೆ ಈಗ ಬಾಲಿವುಡ್ನಲ್ಲೂ ಪೂಜಾಗೆ ಬಂಪರ್ ಆಫರ್ವೊಂದು ಸಿಕ್ಕಿದೆ.

ಹಿಂದಿ ಸಿನಿಮಾಗಾಗಿ ನಾಲ್ಕು ಕೋಟಿಯ ಆರಫ್ ಬಂದಿದೆಯಂತೆ. ಟಾಲಿವುಡ್ನಲ್ಲಿ ಟಾಪ್ ನಟಿಯಾಗಿದ್ದರೂ ಪೂಜಾಗೆ ಸಿಗುತ್ತಿರುವುದು ಮಾತ್ರ 1.5 ಕೋಟಿ. ಆದರೆ ಇದ್ದಕ್ಕಿದ್ದಂತೆಯೇ ಬಾಲಿವುಡ್ನಿಂದ ಪೂಜಾಗೆ ಈ ಆಫರ್ ಸಿಕ್ಕಿರುವುದು ಎಲ್ಲ ಹುಬ್ಬೇರುಬವಂತೆ ಮಾಡಿದೆ. ಪೂಜಾಗೆ ಈ ಆಫರ್ ಸಿಕ್ಕಿರುವುದು ಈಗ ತೆಲುಗು ನಿರ್ಮಾಪಕರಲ್ಲಿ ಆತಂಕ ಮೂಡಿಸಿದೆ. ಇನ್ನು ಪೂಜಾ ಎಲ್ಲಿ ತೆಲುಗು ನಿರ್ಮಾಪಕರ ಕೈಗೆಟುಕದಂತಾಗುತ್ತಾರೋ ಎಂದು. ಅಲ್ಲು ಅರ್ಜುನ್ ಜೊತೆ ನಟಿಸಿದ್ದ ‘ಅಲಾ ವೈಕುಂಠಪುರಂಲೋ’ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ.

Related