ಕೊರೊನಾ ವೈರಸ್ ಓಡಿಸುವ ಅಂಶವನ್ನು ಪತ್ತೆ ಮಾಡಿದ ವಿಜ್ಞಾನಿಗಳು

ಜರ್ನಲ್ ಆಫ್ ನೇಚರ್ ಪ್ರಾಡಕ್ಸ್‍ ನಲ್ಲಿ ಪ್ರಕಟವಾದ ಪ್ರಯೋಗಾಲಯ ಅಧ್ಯಯನ ಪ್ರಕಾರ, ಗಾಂಜಾದಲ್ಲಿನ ಅಂಶವು ಕೋವಿಡ್-19 ಗೆ ಕಾರಣವಾಗುವ ವೈರಸ್ ಅನ್ನು ಆರೋಗ್ಯಕರ ಮನುಷ್ಯರ ಜೀವಕೋಶಗಳಿಗೆ ನುಗ್ಗದಂತೆ ತಡೆಯುತ್ತದೆ ಎಂದು ತಿಳಿದುಬಂದಿದೆ. 

ಸೆಣಬಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಎರಡು ಸಂಯುಕ್ತಗಳ – ಕ್ಯಾನಬಿಜೆರೋಲಿಕ್ ಆಮ್ಲ, ಅಥವ CBGA ಮತ್ತು ಕ್ಯಾನಬಿಡಿಯಾಲಿಕ್ ಆಮ್ಲ ಅಥವ CBDA ಕೊರೊನಾ ವೈರಸ್ ಅನ್ನು ಎದುರಿಸುವ ಸಾಮರ್ಥ್ಯ ವನ್ನು ಹೊಂದಿರುವ ರಾಸಾಯನಿಕ ಸ್ಕ್ರೀನಿಂಗ್ ಪ್ರಯತ್ನದ ಸಮಯದಲ್ಲಿ ಗುರುತಿಸಲಾಗಿದೆ ಎಂದು ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ಹೇಳಿದ್ದಾರೆ. ಸಂಶೋಧಕರು ಪ್ರಯೋಗಾಲಯದಲ್ಲಿ ವೈರಸ್ ನ ಆಲ್ಪಾ ಮತ್ತು ಬೀಟಾ ರೂಪಾಂತರಗಳ ವಿರುದ್ಧ ಸಂಯುಕ್ತಗಳ ಪರಿಣಾಮವನ್ನು ಪರೀಕ್ಷಿಸಿದರು ಎನ್ನಲಾಗಿದೆ.

Related