ಚಾಮರಾಜನಗರಕ್ಕೂ ವಕ್ಕರಿಸಿದ ಕೊರೋನಾ

ಚಾಮರಾಜನಗರಕ್ಕೂ ವಕ್ಕರಿಸಿದ ಕೊರೋನಾ

ಚಾಮರಾಜನಗರ, ಕೊರೋನಾ ಸ್ಫೋಟಗೊಂಡಿದ್ದು, ಸೋಂಕಿತರ ಸಂಖ್ಯೆಕ್ಕೆ ಏರಿಕೆಯಾಗಿದೆ. ಇದುವರೆಗೂ ಹಸಿರು ವಲಯ ಎಂದೇ ಗುರುತಿಸಿಕೊಂಡಿದ್ದ ಚಾಮರಾಜನಗರಕ್ಕೂ ಕೊರೋನಾ  ವಕ್ಕರಿಸಿದೆ.ಮಹಾರಾಷ್ಟ್ರದ ಪುಣೆಯಿಂದ ಹನೂರು ತಾಲ್ಲೂಕಿನ ಪಾಲಿಮೇಡ್‍ಗೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿಗೆ ಕೊರೋನಾ

ಸೋಂಕು ತಗುಲಿರುವುದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ತಮ್ಮ ತಾಯಿಯನ್ನು ನೋಡಲು ಪುಣೆಯಿಂದ ಬಂದಿದ್ದ. ಸ್ಥಳೀಯರು ವಿಷಯ ತಿಳಿದು ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ತಿಳಿಸಿದ್ದರು. ತಕ್ಷಣ ಅಧಿಕಾರಿಗಳು ವೈದ್ಯಕೀಯ ವಿದ್ಯಾರ್ಥಿಯನ್ನು 14 ದಿನಗಳ ಕ್ವಾರಂಟೈನ್‍ಗೆ ಒಳಪಡಿಸಿದೆ.

ಮೊನ್ನೆ ಆತನ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ನಂತರ ಚಾಮರಾಜನಗರದ ನಿಗದಿತ ಆಸ್ಪತ್ರೆಗೆ ಕರೆದೊಯ್ದು ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಆತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Related