ಕೊರೊನಾ ವೈರಸ್ ತಡೆಗಟ್ಟಲು ಆಯುಷ್

ಕೊರೊನಾ ವೈರಸ್ ತಡೆಗಟ್ಟಲು ಆಯುಷ್

ಮೈಸೂರು,ಮಾ. 3 : ಕೊರೊನಾ ವೈರಸ್ ಅನ್ನು ಆಯುಷ್ ಪದ್ಧತಿಯಿಂದ ತಡೆಗಟ್ಟುವ ವಿಧಾನಗಳನ್ನು ಕೇಂದ್ರ ಸರಕಾರದ ಆಯುಷ್ ಸಚಿವಾಲಯ ಪ್ರಕಟಿಸಿದೆ.
ತಾಜಾ, ಬಿಸಿಯಾದ, ಜೀರ್ಣಕ್ಕೆ ಸುಲಭವಾದ ಆಯಾ ಕಾಲದಲ್ಲಿ ಲಭ್ಯವಿರುವ ತರಕಾರಿಗಳನ್ನು ಸೇವಿಸುವುದು, ತುಳಸಿ, ಶುಂಠಿ ಹಾಗೂ ಅರಿಶಿಣಗಳನ್ನು ಬಿಸಿನೀರಿನಲ್ಲಿ ಕುದಿಸಿ ಸ್ವಲ್ಪ ಆಗಾಗ ಕುಡಿಯುವುದು, ಶೀತಲೀಕರಿಸಿದ ಪದಾರ್ಥಗಳನ್ನು ಸೇವಿಸದಿರುವುದು, ತಂಪಾದ ಗಾಳಿ ಬೀಸುವ ಸ್ಥಳದಿಂದ ದೂರವಿರುವುದು, ಯೋಗಾಸನ ಹಾಗೂ ಪ್ರಾಣಾಯಾಮ ಮಾಡುವುದರಿಂದ ಕೊರೊನಾ ವೈರಸ್ ಸೋಂಕು ತಗಲುವುದನ್ನು ತಡೆಯಬಹುದು ಎಂದು ಆಯುಷ್ ಸಚಿವಾಲಯ ತಿಳಿಸಿದೆ.

ಕೊರೊನಾ ವೈರಸ್ ಹರಡದಂತೆ ತಡೆಯಲು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು, ಆಗಾಗ ಸಾಬೂನಿನಿಂದ ಕೈತೊಳೆಯುವುದು, ಕೆಮ್ಮುವಾಗ ಹಾಗೂ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸದಿಂದ ಮುಚ್ಚಿಕೊಳ್ಳುವುದು, ಕೆಮ್ಮು ಮತ್ತು ಶೀತ ಲಕ್ಷಣಗಳಿರುವ ವ್ಯಕ್ತಿಗಳಿಂದ ದೂರವಿರುವುದು, ಕಸಾಯಿಖಾನೆ ಹಾಗೂ ಪ್ರಾಣಿಗಳ ಮಾರಾಟ ಸ್ಥಳಗಳಿಂದ ದೂರವಿರಬೇಕು ಎಂದು ಪ್ರಕಟಣೆ ತಿಳಿಸಿದೆ.

Related