ಕರೋನಾ ಔಷಧಿಗೆ ಮಂಗಗಳ ಮೇಲೆ ಪ್ರಯೋಗ

ಕರೋನಾ ಔಷಧಿಗೆ ಮಂಗಗಳ ಮೇಲೆ ಪ್ರಯೋಗ

ಚೀನಾ, ಮಾ. 17 : ಕರೋನಾ ವೈರಸ್ ಗೆ ಔಷಧಿ ಕಂಡು ಹಿಡಿಯಲು ಚೀನಾ ಮಂಗಗಳ ಮೇಲೆ ಪ್ರಯೋಗ ಮಾಡ್ತಿದೆ. ಮಂಗಗಳ ಮೇಲೆ ಮಾಡಿದ ಪ್ರಯೋಗ ಸಫಲವಾದ್ರೆ ಕರೋನಾಕ್ಕೆ ಔಷಧಿ ಸಿಗಲಿದೆ. ಚೀನಾ ವಿಜ್ಞಾನಿಗಳು ಈಗಾಗಲೇ ಪ್ರಯೋಗ ಶುರು ಮಾಡಿದ್ದು, ಶೀಘ್ರದಲ್ಲಿಯೇ ಫಲಿತಾಂಶ ನಿರೀಕ್ಷೆ ಮಾಡಲಾಗ್ತಿದೆ.
ಚೀನಾದ ವಿಜ್ಞಾನಿಗಳು ಕೆಲವು ಕೋತಿಗಳಿಗೆ ಕರೋನಾ ವೈರಸ್ ಸೋಂಕು ತಗುಲಿಸಿದ್ದಾರೆ. ಸೋಂಕಿತ ಕೋತಿಗಳಿಗೆ ಲಸಿಕೆ ಹಾಕಿ ಪ್ರಯೋಗ ಮಾಡಲಾಗುವುದು. ವಿಜ್ಞಾನಿಗಳು ಈ ಬಗ್ಗೆ ಸಮಸ್ಯೆಯೊಂದನ್ನು ಹೇಳಿದ್ದಾರೆ. ಪ್ರಾಣಿಗಳಲ್ಲಿ ಕರೋನಾ ವೈರಸ್ ಸೋಂಕು ಕಣ್ಣುಗಳ ಮೂಲಕ ಹರಡುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಹಾಗಾದ್ರೆ ಕರೋನಾ ವೈರಸ್ನ ಸೋಂಕು ನಿವಾರಣೆಗೆ ಮುಖವಾಡ ಕೂಡ ಕೆಲಸ ಮಾಡುವುದಿಲ್ಲ.
ಕರೋನಾ ವೈರಸ್ ಲಸಿಕೆ ತಯಾರಿಸಲು ಪ್ರಪಂಚದಾದ್ಯಂತ ಪ್ರಯೋಗಗಳನ್ನು ಮಾಡಲಾಗುತ್ತಿದೆ. ವಿಶೇಷವಾಗಿ ಅಮೆರಿಕ ಮತ್ತು ಚೀನಾದ ವಿಜ್ಞಾನಿಗಳು ರಾತ್ರಿಯಿಡೀ ಲಸಿಕೆಗಳ ಆವಿಷ್ಕಾರದಲ್ಲಿ ನಿರತರಾಗಿದ್ದಾರೆ.

Related