ಕೊರೋನಾ ಪರೀಕ್ಷೆ ಕಡ್ಡಾಯ: ಕೆ. ಸುಧಾಕರ್

ಕೊರೋನಾ ಪರೀಕ್ಷೆ ಕಡ್ಡಾಯ: ಕೆ. ಸುಧಾಕರ್

ಬೆಂಗಳೂರು, ಏ. 21 : ‘ಕೋವಿಡ್–19ಗೆ ರಾಜ್ಯದಲ್ಲಿ ಮೃತಪಟ್ಟವರು 55 ರಿಂದ 80 ವರ್ಷದೊಳಗಿನವರಾಗಿದ್ದು, ಹಿರಿಯ ನಾಗರಿಕರನ್ನು ಉಳಿಸಿಕೊಳ್ಳಲೇಬೇಕು ಎಂಬ ಕಾರಣಕ್ಕೆ 55 ವರ್ಷ ಮೇಲ್ಪಟ್ಟ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
‘55 ವರ್ಷ ಮೇಲ್ಪಟ್ಟವರು ಸಣ್ಣ ಆಯಾಸ ಇದ್ದರೂ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ನಿಗದಿತ ಆಸ್ಪತ್ರೆಗೆ ಬರಬೇಕು. ಇದುವರೆಗೆ ಮೃತಪಟ್ಟ ಹೆಚ್ಚಿನವರು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬಂದವರು. ಅಂತಹ ಪರಿಸ್ಥಿತಿಯಲ್ಲಿ ಅವರನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಶೇ 7.7ರಷ್ಟು (57.91 ಲಕ್ಷ) ಜನರಿದ್ದಾರೆ. ಮನೆಯಲ್ಲಿ ಅಂತರ ಕಾಯ್ದುಕೊಂಡು ಅವರನ್ನು ಇರಿಸುವುದರ ಜತೆಗೆ ಕೋವಿಡ್ ಪಿಡುಗು ಸಂಪೂರ್ಣ ನಿವಾರಣೆ ಆಗುವವರೆಗೆ ಹಿರಿಯ ನಾಗರಿಕರು ಅದರಲ್ಲೂ ಮುಖ್ಯವಾಗಿ ಶ್ವಾಸಕೋಶ, ಮೂತ್ರಪಿಂಡ, ಹೃದಯ, ಕ್ಯಾನ್ಸರ್, ಎಚ್ಐವಿ, ಅಧಿಕ ರಕ್ತದೊತ್ತಡ, ಮಧುಮೇಹದಂತಹ
ಕಾಯಿಲೆಗಳಿಂದ ಬಳಲುತ್ತಿರುವವರನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ’ ಎಂದರು.

Related