5 ಮಂದಿಗೆ ಕೊರೋನಾ

5 ಮಂದಿಗೆ ಕೊರೋನಾ

ಲಿಂಗಸುಗೂರು : ಪಟ್ಟಣದ ಇಬ್ಬರು ನಿವಾಸಿಗಳು, ಹಟ್ಟಿ ಚಿನ್ನದ ಗಣಿಯಲ್ಲಿ ಇಬ್ಬರು ಕಾರ್ಮಿಕರು ಹಾಗೂ ಗುಂತಗೋಳ ಗ್ರಾಮದ 1 ವರ್ಷದ ಮಗು ಸೇರಿ ತಾಲೂಕಿನಲ್ಲಿ ಮತ್ತೆ 5 ಜನರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ.

ಜೂನ್ 3ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದ ವರದಿ ಬಂದಿದ್ದು, ಅದರಲ್ಲಿ ಆಂಧ್ರಪ್ರದೇಶಕ್ಕೆ ಹೋಗಿ ಬಂದಿದ್ದ ಇಬ್ಬರು ಸಹೋದರರ ಕೊವೀಡ್-19 ದೃಢಪಟ್ಟಿದೆ. 7 ದಿನಗಳ ಹೋಂ ಕ್ವಾರಂಟೈನ್‌ನಲ್ಲಿದ್ದ ಇಬ್ಬರು ನಂತರದಲ್ಲಿ ಪಟ್ಟಣದ ಬಹುತೇಕ ಕಡೆ ಕೆಲಸ ಮಾಡಿಕೊಂಡಿದ್ದರು.

ಹಲವರ ಜೊತೆ ವ್ಯವಹಾರ ಮಾಡಿರುವ ಇವರು ಇತರರ ಜೊತೆ ಸಂಪರ್ಕ ಹೊಂದಿದ್ದರು. ಮಹಾರಾಷ್ಟದಿಂದ ಹಿಂದಿರುಗಿದ್ದ ಗುಂತಗೋಳ ಗ್ರಾಮಸ್ಥರು ಕೆಲ ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿದ್ದು ಮನೆಗೆ ತೆರಳಿದ್ದರು. ಆದರೆ ಒಂದು ವರ್ಷದ ಮಗುವಿಗೆ ಸೋಂಕು ಇರುವುದು ದೃಢಪಟ್ಟಿದೆ.

ಮಹಾರಾಷ್ಟ ಬಂದಿದ್ದ ಹಟ್ಟಿ ಚಿನ್ನದ ಗಣಿ ಕಂಪನಿ ಪ್ರದೇಶದ ವ್ಯಕ್ತಿ ಹಾಗೂ ರೋಡಲಬಂಡ (ತವಗ) ಬಾಲಕನಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಈ ನಾಲ್ವರ ಜೊತೆ ಗುಂತಗೋಳ ಗ್ರಾಮದ ಮಗು ಮತ್ತು ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

Related