ಕೊರೋನಾ ಎಫೆಕ್ಟ್: ದೇವರಿಗೂ ಮಾಸ್ಕ್

  • In State
  • March 10, 2020
  • 218 Views
ಕೊರೋನಾ ಎಫೆಕ್ಟ್: ದೇವರಿಗೂ ಮಾಸ್ಕ್

ವಾರಣಾಸಿ, ಮಾ. 10 : ವಿಶ್ವಾದ್ಯಂತ ಕ್ಷಿಪ್ರ ವೇಗದಲ್ಲಿ ಹರಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ಎಲ್ಲರಲ್ಲೂ ಆತಂಕ ಮೂಡಿಸಿದೆ. ಮುಂಜಾಗ್ರತಾ ಕ್ರಮವಾಗಿ ಜನರು ಮಾಸ್ಕ್ ಧರಿಸಿ ತಿರುಗಾಡುವುದು ಇದೀಗ ಸಮಾನ್ಯ. ಆದರೀಗ ಕೊರೋನಾ ಎಫೆಕ್ಟ್ ದೇವರಿಗೂ ತಟ್ಟಿದೆ. ಭಾರತದ ಸಾಂಸ್ಕೃತಿಕ ನಗರಿ ವಾರಣಾಸಿಯಲ್ಲಿ ದೇವಾಲಯದ ಅರ್ಚಕರು ದೇವರ ವಿಗ್ರಹಕ್ಕೂ ಮಾಸ್ಕ್ ಧರಿಸಿ ಪೂಜೆ ಮಾಡುತ್ತಿದ್ದಾರೆ. ಜೊತೆಗೆ ದೇವರ ವಿಗ್ರಹ ಮುಟ್ಟದಂತೆ ಭಕ್ತರಿಗೆ ಮನವಿ ಮಾಡಿದ್ದಾರೆ.

ಕೊರೋನಾ ವೈರಸ್ ದೇಶಾದ್ಯಂತ ಹರಡುತ್ತಿದೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ನಾವು ವಿಶ್ವನಾಥ ದೇವರಿಗೆ ಮಾಸ್ಕ್ ಹಾಕಿದ್ದೇವೆ ಎಂದು ದೇವಾಲಯದ ಅರ್ಚಕ ಕೃಷ್ಣ ಆನಂದ ಪಾಂಡೆ ತಿಳಿಸಿದ್ಧಾರೆ. ಅಷ್ಟೇ ಅಲ್ಲದೇ, ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಭಕ್ತರು ದೇವರ ವಿಗ್ರಹಗಳನ್ನು ಮುಟ್ಟದಂತೆ ಮನವಿ ಮಾಡಿದ್ದಾರೆ.

Related